ಹೊಸದಿಲ್ಲಿ:
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ( ಸಿಬಿಎಸ್‌ಇ ) 2020ರ 10 ಮತ್ತು 12ನೇ ತರಗತಿ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿದೆ.
ಫೆಬ್ರವರಿ 15 ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, 10ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಿಂದ ಶುರುವಾಗಿ ಮಾರ್ಚ್ 20 ರ ವರೆಗೆ ನಡೆಯಲಿವೆ. 12ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಿಂದ ಶುರುವಾಗಿ ಮಾರ್ಚ್ 30 ರಂದು ಮುಕ್ತಾಯಗೊಳ್ಳಲಿವೆ ಎಂದು ಮಂಡಳಿ ತಿಳಿಸಿದೆ.