ಬೆಂಗಳೂರು :
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ಮುತ್ತಪ್ಪ ರೈ ಮಗನ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈಚೆಗಷ್ಟೇ ಮೃತಪಟ್ಟಿರುವ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈಗೆ ಮಂಗಳೂರು ಹಾಗೂ ಮುಂಬೈ ಡ್ರಗ್ ಪೆಡ್ಲರ್ಗಳ ಜತೆ ಸಂಪರ್ಕ ಹೊಂದಿದ ಶಂಕೆ ಇದೆ. ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆ ಎನ್ನುವ ಗುಮಾನಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಹಾಗೆಯೇ ಬಂಧಿತ ಪೆಡ್ಲರ್ಗಳ ಮೊಬೈಲ್ ರಿಟ್ರೈವ್ ಮಾಡಿದಾಗ ಮುತ್ತಪ್ಪ ರೈ ಮಗನ ಕೆಲ ಕಾಲ್ ಲಿಸ್ಟ್ ಹಾಗೂ ಮೆಸೇಜ್ ಬಯಲಾಗಿತ್ತು ಎನ್ನಲಾಗಿದೆ.
ರಿಕ್ಕಿ ವಿರುದ್ಧ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು, ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಅವರಿಗೆ ಸೇರಿರುವ ಎರಡು ಮನೆಗಳು ಸೇರಿದಂತೆ ಕೆಲವು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಬಿಡದಿ ಮತ್ತು ಬೆಂಗಳೂರಿನ ವೈಯಾಲಿಕಾವಲ್ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/10/Mutthappa.jpg)