ಬೆಂಗಳೂರು :
ಎಫ್ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು, ಪ್ರಮುಖ ಆರೋಪಿಗಳಾದಂತ ಕೆಪಿಎಸ್ಸಿಯ ಇಬ್ಬರು ನೌಕರರನ್ನು ಬಂಧಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದೆ. ಈಗಾಗಲೇ 14 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಗಳಾದಂತ ಕೆಪಿಎಸ್ಸಿ ಕಚೇರಿಯ ಎಸ್ ಡಿ ಎ ರಮೇಶ್, ಸ್ಟೆನೋಗ್ರಾಫರ್ ಸನಾ ಬೇಡಿ ಬಂಧಿಸಿದೆ.
ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷಾ ವಿಭಾಗದ ಕಂಟ್ರೋಲರ್ ವಿಭಾಗದಲ್ಲಿ ಸೇನಾ ಬೇಡಿ ಎಂಬಾಕೆ ಕೆಲಸ ನಿರ್ವಹಿಸುತ್ತಿದ್ದಳು. ನೇಮಕಾತಿ ಸಂಬಂಧ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಕೈಗೆ ಸಿಗುತ್ತಿದ್ದವು. ಭಾನುವಾರ ನಡೆಯಬೇಕಿದ್ದ ಪ್ರಶ್ನೆ ಪತ್ರಿಕೆಯನ್ನು ಸೇನಾ ಬೇಡಿ ಆಯೋಗದಲ್ಲಿಯೇ ಕೆಲಸ ಮಾಡುವ ದ್ವಿತೀಯ ದರ್ಜೆ ಸಹಾಯಕ ರಮೇಶ್ ಎಂಬಾತನಿಗೆ ನೀಡಿದ್ದಾರೆ. ಪೂರ್ವ ನಿಯೋಜಿತ ಸಂಚಿನಂತೆ ಪ್ರಶ್ನೆ ಪತ್ರಿಕೆಯನ್ನು ರಮೇಶ್ ಕೈಗೆ ನೀಡಿದ್ದು, ಆತ ಅದನ್ನು ಚಂದ್ರು ಹಾಗೂ ಇತರರಿಗೆ ನೀಡಿ ಹಣ ಪಡೆದಿರುವ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಶ್ನೆ ಪತ್ರಿಕೆ ಮಾರಾಟ ದಂಧೆಯಲ್ಲಿ ತೊಡಗಿ ಸಿಕ್ಕಿಬಿದ್ದ ಚಂದ್ರು ನೀಡಿದ ಮಾಹಿತಿ ಮೇರೆಗೆ ಆಯೋಗದ ದ್ವಿತೀಯ ದರ್ಜೆ ಸಹಾಯಕ ರಮೇಶ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ