ಬೆಂಗಳೂರು :
ಸ್ಥಳೀಯವಾಗಿ ಸಿದ್ಧಪಡಿಸಿದ್ದ ಬ್ರಾಂಡ್ ಅಲ್ಲದ ಸಾಧಾರಣ ಟಿವಿಗಳಿಗೆ ಪ್ರತಿಷ್ಠಿತ ಬ್ರ್ಯಾಂಡ್ ಕಂಪನಿಯ ಸ್ಟಿಕರ್ ಅಂಟಿಸಿ ಮಾರಾಟ ಮಾಡುತ್ತಿದ್ದ ಖದೀಮನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆಯ ಸುರೇಶ್ ಬಂಧಿತ ಆರೋಪಿ. ಈತ ಸಾಧಾರಣ ಟಿವಿಗಳನ್ನ ಖರೀದಿ ಮಾಡಿ ಅದಕ್ಕೆ ಸೋನಿ ಕಂಪನಿ ಸ್ಟಿಕರ್, ಸ್ಯಾಂಮ್ ಸಂಗ್ ಕಂಪನಿ ಸ್ಟಿಕರ್ ಅಂಟಿಸಿ ಅಸಲಿ ಟಿವಿ ಗಳಂತೆ ಬಿಂಬಿಸಿ ಅಧಿಕ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಈ ವಿಚಾರ ತಿಳಿದು ಕಂಪನಿ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇರೆಗೆ ಸಿಸಿಬಿ ಪೊಲೀಸರು ತಂಡ ರಚನೆ ಮಾಡಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ 15 ಟಿವಿ, 75 ಸಾವಿರ ರೂ. ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/07/tv-duplicate-sony.jpg)