ಬೆಂಗಳೂರು :

ಅನಧಿಕೃತವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಮೂವರನ್ನು ಬಂಧಿಸಿದ್ದಾರೆ.
ಬಾರ್ ಮಾಲೀಕ ಚಿನ್ಮಯಿ (40), ಕ್ಯಾಷಿಯರ್ ಸೌರಭ್ ಜೈನ್ (23), ಓಂಕಾರ ಸಮಂತ್ (21) ಬಂಧಿತ ಆರೋಪಿಗಳು. ನಗರದ ನಾಗರಬಾವಿಯ ಎನ್ ಜಿಎಫ್ ಲೇಔಟ್ ನಲ್ಲಿರುವ 1947 ಬ್ಲಾಕ್ ಹೌಸ್ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಈ ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 22 ಫ್ಲೇವರ್ ನ 28 ಹುಕ್ಕಾ ಪಾಟ್, 4,400ರೂ.ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








