ಮಂಡ್ಯ ಪ್ರಚಾರದಿಂದ ದರ್ಶನ್ ದೂರ!..?

ಮಂಡ್ಯ: 

      ಹೈ ವೋಲ್ಟೇಜ್ ಕಣವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ  4 ದಿನಗಳಿಂದ ಬಿರುಗಾಳಿ ಪ್ರಚಾರ ನಡೆಸಿದ್ದ ದರ್ಶನ್ ಇಂದಿನಿಂದ ಪ್ರಚಾರಕ್ಕೆ ಬಿಡುವು ನೀಡಿದ್ದಾರೆ.

     ಗುರುವಾರ ದರ್ಶನ್ ನಾಗಮಂಗಲದಲ್ಲಿ ನಡೆದ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪ್ರಚಾರಕ್ಕೆ ಬಂದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲೆಂದು ದರ್ಶನ್ ಇರುವ ಕಡೆ ನುಗ್ಗಿದ್ದಾರೆ.  ಬಲಗೈ ನೋವಿನ ನಡುವೆಯೂ ಅವರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಅಭಿಮಾನಿಗಳ ನೂಕುನುಗ್ಗಲು ಉಂಟಾಗಿ ಕೈಕುಲುಕುವುದು, ಮುತ್ತಿಕ್ಕುತ್ತಿದ್ದ ಕಾರಣ ಕೈ ನೋವು ಹೆಚ್ಚಾಗಿದೆ. ಅಲ್ಲದೆ ಇದೇ ಸಂದರ್ಭದಲ್ಲಿ ಈ ಹಿಂದೆ ಅಪಘಾತದಲ್ಲಿ ಫ್ರಾಕ್ಚರ್ ಆಗಿದ್ದ ದರ್ಶನ್ ಕೈ ಹಿಡಿದು ಎಳೆದಾಡಿದ್ದಾರೆ.

     ಅಲ್ಲದೆ, ವಾಹನ ಇಳಿಯುವ ಸಂದರ್ಭದಲ್ಲಿ ಮತ್ತೆ ಪೆಟ್ಟಾಗಿದೆ. ನಿರಂತರವಾಗಿ ನಿಂತುಕೊಂಡೇ ಪ್ರಚಾರ ನಡೆಸಿರುವ ಕಾರಣ ಬೆನ್ನು ನೋವಾಗಿದೆ ಎನ್ನಲಾಗಿದ್ದು, 4 ದಿನಗಳ ಕಾಲ ಚಿಕಿತ್ಸೆ, ವಿಶ್ರಾಂತಿ ಪಡೆಯಲಿದ್ದಾರೆ. 4 ದಿನಗಳ ನಂತರ ಮತ್ತೆ ಅವರು ಬಿರುಗಾಳಿ ಪ್ರಚಾರ ನಡೆಸಲಿದ್ದಾರೆ.

      ಈ ಹಿಂದೆಯೇ ಅಪಘಾತದಲ್ಲಿ ದರ್ಶನ್ ಬಲಗೈಗೆ ನೋವಾಗಿತ್ತು. ಇದೀಗ ಅಭಿಮಾನಿಗಳ ನೂಕುನುಗ್ಗಲಿನಿಂದಾಗಿ ದರ್ಶನ್ ಬಲಗೈಗೆ ಮತ್ತೆ ನೋವಾಗಿದೆ. ಹಾಗಾಗಿ ದರ್ಶನ್ ಬಲಗೈ ನೋವಿನಿಂದ ಬೆಂಗಳೂರಿನ ಕಡೆ ದರ್ಶನ್ ಪ್ರಯಾಣಿಸಿದ್ದಾರೆ.

      ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರ ಪರವಾಗಿ ನಟರಾದ ಯಶ್ ಮತ್ತು ದರ್ಶನ್ ಬಿರುಸಿನ ಪ್ರಚಾರ ನಡೆಸಿದ್ದಾರೆ.

     ಯಶ್ ಮತ್ತು ಸುಮಲತಾ ಅವರು ಮಂಡ್ಯ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಪ್ರವಾಸ ಕೈಗೊಂಡಿದ್ದು, ವಿವಿಧ ಕಡೆ ಪ್ರಚಾರ ನಡೆಸಿ ಮತ ಯಾಚಿಸಲಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link