ತಾಂತ್ರಿಕ ದೋಷ : ಚಂದ್ರಯಾನ-2 ಮುಂದೂಡಿಕೆ!!

ಬೆಂಗಳೂರು:

      ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಚಂದ್ರಯಾನ-2 ಉಡ್ಡಯನವನ್ನು ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ.

      ಚಂದ್ರಯಾನ- 2 ಉಡಾವಣೆಗೆ 56 ನಿಮಿಷ 24 ಸೆಕೆಂಡ್ ಬಾಕಿ ಇರುವಾಗ ತಾಂತ್ರಿಕ ದೋಷ ಪತ್ತೆಯಾಗಿತ್ತು. ತಕ್ಷಣ ಅಧಿಕಾರಿಗಳ ಸಮಾಲೋಚನೆ ನಡೆಸಿದ ಇಸ್ರೋ ಸುದ್ದಿಗೋಷ್ಠಿ ಕರೆದು ಚಂದ್ರಯಾನ-2 ರದ್ದು ಮಾಡಲಾಗಿದೆ.

      ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ಮುಂಜಾನೆ 2.51ರಲ್ಲಿ ಚಂದ್ರಯಾನ ಉಡ್ಡಯನ ನಡೆಯಬೇಕಿತ್ತು. ಆದರೆ, ಅದಕ್ಕೂ 56 ನಿಮಿಷಗಳ ಮುಂಚಿತವಾಗಿ 978 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ರದ್ದುಗೊಳ್ಳಿಸಲಾಯಿತು.

      ಕವಾಟದಲ್ಲಿನ ಇಂಧನ ಸೋರಿಕೆಯೇ ಉಡಾವಣೆಯ ಮುಂದೂಡಿಕೆಗೆ ಕಾರಣ ಎಂದು ಊಹಿಸಲಾಗಿದೆ. ಆದರೆ, ಇದನ್ನು ಪರಿಶೀಲಿಸಲಾಗುತ್ತಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಚಂದ್ರಯಾನ-2 ಉಡಾವಣೆಯನ್ನು ನಿಲ್ಲಿಸಲಾಗಿದೆ. ಪರಿಷ್ಕೃತ ಉಡಾವಣಾ ದಿನಾಂಕವನ್ನು ತದನಂತರ ಪ್ರಕಟಿಸಲಾಗುವುದು ಎಂದು ಇಸ್ರೋ ವಕ್ತಾರರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

     

Recent Articles

spot_img

Related Stories

Share via
Copy link
Powered by Social Snap