ಕುಣಿಗಲ್ :
ತಾಲ್ಲೂಕಿನ ಹೊರವಲಯ ಜಾನ್ಸನ್ ಪ್ಯಾಕ್ಟರಿ ಸಮೀಪ ಸಿ.ಟಿ.ಪಾಳ್ಯ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ಡಿ.11 ರ ರಾತ್ರಿ 8 .30ಗಂಟೆ ವೇಳೆ ರಸ್ತೆ ದಾಟಿ ಹೋಗುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾರಿ ರಕ್ತಸ್ರಾವಗೊಂಡ ಚಿರತೆ ಸಾವನ್ನಪ್ಪಿದೆ.
ಈ ದೃಶ್ಯ ನೋಡಿದ ಗ್ರಾಮಸ್ಥ ಗಾಬರಿಗೊಂಡು ಹುಲಿ ಮರಿ ಇರಬೇಕು ಎಂದು ಹೇಳುವ ವಿಚಾರದಿಂದ ಭಯಬೀತರಾದ ಜನರು ಅಧಿಕಾರಿಗಳಿಗೆ ದೂರವಾಣಿ ಮಾಹಿತಿ ನೀಡಿದಾಗ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಕುಣಿಗಲ್ ಪೊಲೀಸರು ಆಗಮಿಸಿ ಸ್ಥಳ ಮಾಜುರುಪಡಿಸಿದ ನಂತರ ಚಿರತೆಯ ದೇಹವನ್ನು ಪರೀಕ್ಷೆಗೊಳಪಡಿಸಲು ಅರಣ್ಯಾಧಿಕಾರಿ ಮಂಜುನಾಥ್ ಕ್ರಮಕೈಗೊಂಡಿರುವ ಅವರು ಈ ಚಿರತೆ ಕೇವಲ ಎರಡುವರ್ಷದ ಗಂಡು ಮರಿಯಾಗಿದೆ ರಸ್ತೆ ದಾಟುವಾಗ ಈ ಸಾವು ಸಂಭವಿಸಿದ್ದು ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
