ಮಂಡ್ಯ:
ಸಾಲದ ಬಾಧೆಯಿಂದ ಕಂಗೆಟ್ಟಿದ್ದ ರೈತನೊಬ್ಬ ಡೆತ್ ನೋಟ್ ನಲ್ಲಿ ಮುಖ್ಯಮಂತ್ರಿಗಳ ಹೆಸರು ಬರೆದಿಟ್ಟು, ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮುಖ್ಯಮಂತ್ರಿಗಳು ಇಂದು ಮಂಡ್ಯಕ್ಕೆ ಆಗಮಿಸುತ್ತಿರುವ ಬೆನ್ನಲ್ಲೇ ಸಾಲಬಾಧೆ ಮತ್ತು ಅನಾರೋಗ್ಯ ಹಿನ್ನೆಲೆಯಲ್ಲಿ ಜಮೀನಿನ ಬಳಿ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ರೈತ ಜಯಕುಮಾರ್(43) ಮೃತ ರೈತ. ಈತನಿಗೆ ಮದುವೆಯಾಗಿ ಸುಮಾರು 15 ವರ್ಷ ಆಗಿದೆ. ರಕ್ಷಿತಾ(13), ಮತ್ತು ರಾಜೇಶ್(10) ಎಂಬ ಇಬ್ಬರು ಚಿಕ್ಕಮಕ್ಕಳಿದ್ದಾರೆ. ಈತ 35 ಗುಂಟೆ ಜಮೀನು ಹೊಂದಿದ್ದು, ಕಬ್ಬು, ತರಕಾರಿ ಬೆಳೆಯುತ್ತಿದ್ದ.
ಸುಮಾರು 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ರೈತ ಜಯಕುಮಾರ್, 80 ಸಾವಿರ ಸಾಲ ಮಾಡಿ ವ್ಯವಸಾಯಕ್ಕೆ ಹಾಕಿದ್ದೆ ಅದೂ ಕೂಡ ಕೈ ಹಿಡಿಯಲಿಲ್ಲ. ಗಂಟಲು ಕ್ಯಾನ್ಸರ್ ಇದ್ದು ವೈದ್ಯರು ಮೂರು ಲಕ್ಷ ಹಣ ಬೇಕು ಎಂದಿದ್ದರು. ಕುಟುಂಬಕ್ಕೆ ಸಹಾಯ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಜಯಕುಮಾರ್, ಕೃಷಿ ಕಾರ್ಯಗಳಿಗಾಗಿ ಖಾಸಗಿಯವರಿಂದ ಸಾಲ ಪಡೆದಿದ್ದು, ಅವರುಗಳ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ