ತುಮಕೂರು :
‘ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ದಿನ ದಾಸೋಹ ದಿನವನ್ನಾಗಿ ಸರ್ಕಾರ ಘೋಷಿಸಲಿದೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯ ಎರಡನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಠದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಿಎಂ ಯೂಡಿಯೂರಪ್ಪ ಚಾಲನೆ ನೀಡಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ದಿನ ದಾಸೋಹ ದಿನವನ್ನಾಗಿ ಸರ್ಕಾರ ಘೋಷಿಸಲಿದೆ ಎಂದರು.
ಜೀವನದಲ್ಲಿ ನೀನು ಒಬ್ಬನೇ ಸಾಧಿಸಿ ಮೇಲೆ ಬರುವುದಕ್ಕಿಂತ 10 ಜನರನ್ನು ಮೇಲೆತ್ತು ಎಂದ ಸ್ವಾಮೀಜಿ ಅವರ ಮಾತು ಮತ್ತು ನಡೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿದೆ. ಸ್ವಾಮೀಜಿ ಭೌತಿಕವಾಗಿ ಇಲ್ಲ ಅಷ್ಟೇ. ಅವರ ಕೆಲಸ ಜೀವಂತ. ಸಿದ್ಧಲಿಂಗ ಸ್ವಾಮೀಜಿ ಅವರೂ ಶಿವಕುಮಾರ ಸ್ವಾಮೀಜಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ವೀರಾಪುರ ಅಭಿವೃದ್ಧಿ ಗೆ ಈಗಾಗಲೇ ಸರ್ಕಾರ ₹ 25 ಕೋಟಿ ಬಿಡುಗಡೆ ಮಾಡಿದೆ. ಇದು ಒಟ್ಟು ₹ 80 ಕೋಟಿಯ ಯೋಜನೆ. ಅಲ್ಲದೇ ಶಿವಕುಮಾರ ಸ್ವಾಮೀಜಿ ವಸ್ತುಸಂಗ್ರಹಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ್ದರು. ಅದಕ್ಕೆ ₹ 10 ಕೋಟಿ ಬೇಕಿದೆ. ಅದನ್ನು ಬಿಡುಗಡೆ ಮಾಡುವೆ ಎಂದು ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ