ಬರ ಪರಿಹಾರ ಕಾಮಗಾರಿಗಳಿಗೆ ಸಜ್ಜಾಗಳು ಜಿಲ್ಲಾಧಿಕಾರಿಗಳಿಗೆ ಸೂಚನೆ!!!

ಬೆಂಗಳೂರು :

      ರಾಜ್ಯದಲ್ಲಿ ಮಳೆಕೊರತೆ ಹಿನ್ನಲೆ ಬರ ಪರಿಹಾರ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡು ಸಮರೋಪಾದಿಯಲ್ಲಿ ಕೆಲಸ ಆರಂಭಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

      ವಿಧಾನಸೌಧದ ಸಮಿತಿ ಕೊಠಡಿಲ್ಲಿಂದು ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು ಸೂಚನೆ ನೀಡಿದ್ದಾರೆ.

      ಸತತ ಬರಗಾಲದಿಂದ ರಾಜ್ಯದ ಬಹುತೇಕ ಕಡೆ ಕುಡಿಯುವನೀರಿನ ಸಮಸ್ಯೆ, ಉದ್ಯೋಗದ ಕೊರತೆ, ರೈತರ ಸಮಸ್ಯೆಗಖು ಸೇರಿದಂತೆ ಬರದಿಂದ ಹಲವು ಸಮಸ್ಯೆಗಳು ತಲೆದೋರಿವೆ. ಕಳೆದ ವಾರ ಈ ಸಂಬಂಧ ಆಡಳಿತಾಧಿಕಾರಿಗಳು, ಕಾರ್ಯದರ್ಶಿಗಳೊಂದಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿ, ಬರಪರಿಹಾರ ಕಾಮಗಾರಿಗಳ ತ್ವರಿತ ಕೈಗೊಳ್ಳುವಿಕೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದರು. ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿಗಳೊಂದಿಗೆ ವಿಜಯಭಾಸ್ಕರ್ ಸಭೆ ನಡೆಸಿದರು.

      ಬರಪರಿಹಾರ ಕಾಮಗಾರಿಗಾಗಿ ಈಗಾಗಲೇ ರೂಪಿಸಲಾಗಿರುವ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಬರಗಾಲದ ಜತೆ ಕೆಲ ಜಿಲ್ಲೆಗಳಲ್ಲಿ ಎದುರಾಗಬಹುದಾದ ಅತಿವೃಷ್ಟಿಯ ಆತಂಕವನ್ನು ಎದುರಿಸಲೂ ಸಜ್ಜಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಜನಜೀವನ ಅಸ್ತವ್ಯಸ್ತವಾಗದಂತೆ ನೋಡಿಕೊಳ್ಳಿ.ಜನ,ಜಾನುವಾರಗಳ ಹಿತ ರಕ್ಷಿಸಲು ಅಧಿಕಾರಿಗಳು ಮುಂದಾಗಬೇಕೆಂದು ಅವರು ಸೂಚಿಸಿದರು.

      ಬರ ಪರಿಹಾರ ಕಾಮಗಾರಿಯನ್ನು ಕೇವಲ ಒಂದು ಕಾರ್ಯಕ್ರಮ ಎಂಬಂತೆ ಪರಿಗಣಿಸಬಾರದು‌. ಜನರ ಸಮಸ್ಯೆ ಆಲಿಸಲು ಮುಖ್ಯಮಂತ್ರಿಗಳೇ ಬರಬೇಕು ಎಂಬ ಭಾವನೆ ಜನರಲ್ಲಿ ಬರುತ್ತದೆ ಎಂಬುದೂ ನಿಮ್ಮ ಗಮನದಲ್ಲಿರಲಿ. ಗ್ರಾಮವಾಸ್ತವ್ಯ ನಡೆಸುವ ಮೂಲಕ ಖುದ್ದು ಮುಖ್ಯಮಂತ್ರಿಗಳೇ ಜನರ ಬಳಿ ಹೊರಟಿದ್ದಾರೆ‌.ಹೀಗಾಗಿ ಜನರ ಜೊತೆ ಅಧಿಕಾರಿಗಳು ಬೆರೆತು ಅವರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವಂತೆ ಮುಖ್ಯಕಾರ್ಯದರ್ಶಿಗಳು ಸಭೆಯಲ್ಲಿ ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap