ಬಿಲ್ ಪಾವತಿ ಮಾಡದ ಕಂದಾಯ ಅಧಿಕಾರಿಗೆ ಡಿಸಿ ಕಪಾಳಮೋಕ್ಷ!!!

ಚಿಕ್ಕಮಗಳೂರು : 

      ನೆರೆ ಪರಿಹಾರ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಕಂದಾಯ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕಳಸದ ಹಿರೇಬೈಲ್ ನಲ್ಲಿ ನಡೆದಿದೆ.

      ಕೆಲವೇ ತಿಂಗಳ ಹಿಂದೆ ಚಿಕ್ಕಮಗಳೂರನ್ನು ಕಾಡಿದ್ದ ಪ್ರವಾಹ ಇಡೀ ಜಿಲ್ಲೆಯನ್ನೇ ತತ್ತರಿಸುವಂತೆ ಮಾಡಿತ್ತು. ಜನರು ನೆಲೆಯನ್ನು ಕಳೆದುಕೊಂಡು ಕಂಗಾಲಾಗಿದ್ದರು. ಆದರೆ ಪ್ರವಾಹದ ಈ ಸಮಯದಲ್ಲಿ ವರ್ತಕರಿಂದ ಜಿಲ್ಲಾಡಳಿತ ಸಾಮಗ್ರಿಗಳನ್ನು ಖರೀದಿಸಿ ಅದರ ಹಣವನ್ನು ಇನ್ನೂ ಪಾವತಿಸಿಲ್ಲ. ಇಂದು ಹಿರೇಬೈಲಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಭೇಟಿ ನೀಡಿದ್ದು, ವರ್ತಕರು ಈ ಬಗ್ಗೆ ದೂರು ಒಪ್ಪಿಸಿದ್ದಾರೆ.

      ಕಂದಾಯ ಅಧಿಕಾರಿ ಅಜ್ಜೇಗೌಡರನ್ನು ವಿಷಯದ ಬಗ್ಗೆ ವಿಚಾರಿಸಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಸರ್ಕಾರದಿಂದ ಹಣ ಬಂದಿದೆ. ಯಾಕೆ ಬಿಲ್ ಪಾವತಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಆರ್ ಐ ( ಕಂದಾಯ ಅಧಿಕಾರಿ) ಸಮರ್ಪಕ ಉತ್ತರ ನೀಡದೆ ಇದ್ದಾಗ ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದ್ದಾರೆ.

       ಸಾರ್ವಜನಿಕರ ಎದುರಲ್ಲೇ ಆರ್.ಐ ಅಜ್ಜೇಗೌಡ ಅವರಿಗೆ ಸಾರ್ವಜನಿಕರ ಎದುರಲ್ಲೆ ಕೆನ್ನೆಗೆ ಹೊಡೆದು ಕತ್ತಿನ ಪಟ್ಟಿ ಹಿಡಿದಿದ್ದಾರೆ. ಸ್ಥಳದಲ್ಲಿಯೇ ಸಸ್ಪೆಂಡ್ ಮಾಡ್ತೀನಿ ಎಂದು ಆರ್ ಐ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap