ನಿನ್ನೆ ಮುಂಬೈಗೆ ತೆರಳಿದ್ದ ಶಾಸಕ ಇಂದು ಬೆಂಗಳೂರಿಗೆ ವಾಪಸ್!

ಚಿಕ್ಕಬಳ್ಳಾಪುರ: 

     ನಿನ್ನೆ ಸಂಜೆ ಮುಂಬೈಗೆ ತೆರಳಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರು ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

     ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಗೈರಾಗಿರುವ ಶಾಸಕರಿಗೆ ವಿಪ್‌ ಜಾರಿ ಮಾಡಿದ ಬೆನ್ನಲ್ಲೇ ಎಲ್ಲಾ ಶಾಸಕರೂ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗುತ್ತಿದೆ.

     ಇಂದು ಬೆಳಗ್ಗೆ ದಿಢೀರ್ ಎಂದು ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅವರು, ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ನಗರದೆಡೆಗೆ ಪ್ರಯಾಣ ಬೆಳೆಸಿದ್ದಾರೆ. 

      ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಸುಧಾಕರ್​ಗೆ ಸಚಿವ ಸ್ಥಾನ‌ ಸಿಗುತ್ತದೆ ಅನ್ನೋ ವಿಶ್ವಾಸವಿತ್ತು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಸುಧಾಕರ್​ಗೆ ಸಚಿವ ಸ್ಥಾನ ಕೈ ತಪ್ಪಿತ್ತು. ಇನ್ನು ಸಚಿವ ಸ್ಥಾನ ಹೋದರೂ ನಿಗಮ‌ ಮಂಡಳಿ ಅಧ್ಯಕ್ಷ ಸ್ಥಾನ ಸಿಗುತ್ತದೆ ಅಂತ ಭಾವಿಸಿದ್ದ ಸುಧಾಕರ್​ಗೆ ಅದೂ‌ ಕೈ ತಪ್ಪುವ ಭಯ ಶುರುವಾಯ್ತು. ಇದರಿಂದ ಅಸಮಾಧಾನಗೊಂಡ ಸುಧಾಕರ್ ತನ್ನ ಬೆಂಬಲಿಗರಿಂದ‌ ರಾಜೀನಾಮೆಯ ಹೈಡ್ರಾಮಾ ಕೂಡ ಮಾಡಿದ್ದರು ಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap