ಉಪಚುನಾವಣೆಯಿಂದ ದುಂದುವೆಚ್ಚ : ಕೆ.ಸುಧಾಕರ್

ಬೆಂಗಳೂರು: 

       ಇನ್ನೇನು 4-5 ತಿಂಗಳಲ್ಲಿ ಮುಖ್ಯ ಚುನಾವಣೆ ಬರುವಾಗ ಉಪಚುನಾವಣೆ ಏಕೆ ಬೇಕು ಎಂದು ಪ್ರಶ್ನಿಸಿರುವ ಅವರು, ಕೇಂದ್ರ ಚುನಾವಣಾ ಆಯೋಗದ ನಿರ್ಧಾರದ ವಿರುದ್ದ ಪ್ರತಿಭಟಿಸಬೇಕು ಎಂದಿದ್ದಾರೆ.

      ನವೆಂಬರ್‌ 3ರಂದು ನಡೆಯಲಿರುವ ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯಿಂದ ಕಾಂಗ್ರೆಸ್‌ – ಜೆಡಿಎಸ್‌ ನೇತೃತ್ವದ ಮೈತ್ರಿ ಸರ್ಕಾರ ದೂರವಿರುವಂತೆ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್‌ ರವರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

      ಚುನಾವಣಾ ಆಯೋಗದ ಕ್ರಮ ‘ಹಣದ ದುಂದು ವೆಚ್ಚ ಹಾಗೂ ಪ್ರಜಾಪ್ರಭುತ್ವದ ಕುಣಿತ ಇದಾಗಿದೆ’ ಎಂದು ಕಿಡಿಕಾರಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ