ಚಿಕ್ಕಬಳ್ಳಾಪುರ:

ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹೋದ ತಾಯಿ ಸೇರಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಮಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಿಜಯಲಕ್ಷ್ಮೀ(30), ಅಜಯ್ (10), ಐಶ್ವರ್ಯ (8) ಮೃತ ದುರ್ದೈವಿಗಳು.
ವಿಜಯಲಕ್ಷ್ಮೀ ಬಾವಿಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಆಟವಾಡುತ್ತಿದ್ದ ಮಗಳು ಐಶ್ವರ್ಯ ಕಾಲು ಜಾರಿ ಬಾವಿಗೆ ಬಿದ್ದಿದ್ದಾಳೆ. ಇದನ್ನು ಕಂಡ ತಾಯಿ ವಿಜಯಲಕ್ಷ್ಮೀ ಮಗಳನ್ನು ಕಾಪಾಡುವ ಆತುರದಲ್ಲಿ ಬಾವಿಗೆ ಇಳಿದಿದ್ದಾರೆ. ಈಜು ಬಾರದ ಕಾರಣ ಮಗುವಿನೊಂದಿಗೆ ತಾಯಿಯೂ ನೀರಿನಲ್ಲಿ ಮುಳುಗಿದ್ದಾಳೆ. ತಾಯಿ ಮತ್ತು ತಂಗಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಮಗ ಅಜಯ್ ಬಾವಿಗೆ ಹಾರಿದ್ದು, ಮೂವರೂ ಜಲಸಮಾಧಿಯಾಗಿದ್ದಾರೆ.
ಆದರೆ, ಮಹಿಳೆ ಪೋಷಕರು ಆಕೆಯ ಪತಿಯೇ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತಪಡಿಸಿದ್ದು, ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








