ತುಮಕೂರು : ‘ಕೈ’ ತಪ್ಪಿದ ಟಿಕೆಟ್: ಶಾಸಕ ಸುಧಾಕರ್ ಗರಂ!!

ಬೆಂಗಳೂರು: 

     ತುಮಕೂರು ಸಂಸದ ಮುದ್ದೆಹನುಮೇಗೌಡರಿಗೆ ಟಿಕೆಟ್ ದಕ್ಕದೇ ಇರುವುದರಿಂದ ಈಗಾಗಲೇ ಹಲವು ನಾಯಕರು ಗರಂ ಆಗಿದ್ದು ಈಗ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಕೂಡಾ ಬೇಸರ ವ್ಯಕ್ತಡಿಸಿದ್ದಾರೆ.

      ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುವುದರಿಂದ ಸೀಟು ಹಂಚಿಕೆ ವೇಳೆ ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾಗಿತ್ತು.

      ಈ ಮಧ್ಯೆ ಕಾಂಗ್ರೆಸ್‍ ಶಾಸಕರು ಮುದ್ದಹನುಮೇಗೌಡ ಬೆಂಬಲಕ್ಕೆ ನಿಂತಿದ್ದು, ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್​ ಟ್ವೀಟ್‍ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ. ಜಾತಿ ವಿಚಾರವನ್ನು ಮುಂದಿಟ್ಟು ಟ್ವೀಟ್‍ ಮಾಡಿರುವ ಅವರು, ಮತ್ತೊಮ್ಮೆ ಯೋಗ್ಯ ಒಕ್ಕಲಿಗ ನಾಯಕನಿಗೆ ಅನ್ಯಾಯವಾಗಿದೆ. ಮುದ್ದಹನುಮೇಗೌಡರಿಗೆ ನನ್ನ ನೈತಿಕ ಬೆಂಬಲ ಇದೆ ಎಂದು ಹೇಳಿದ್ದಾರೆ.

      ಸದ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮುದ್ದೆಹನುಮೇಗೌಡ ಸಂಸದರಾಗಿರುವುದರಿಂದ ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಸೇರಿ ಹಲವರು ಅಸಮಧಾನ ವ್ಯಕ್ತಪಡಿಸಿದ್ದರು.

      ರಾಜ್ಯದ ಮೈತ್ರಿ ಪಕ್ಷದಲ್ಲಿ ಲೋಕಸಭಾ ಚುಣಾವಣೆಯ ಟಿಕೆಟ್ ಗೊಂದಲ ಇನ್ನೂ ಬಗೆಹರಿದಿಲ್ಲ. ಜೆಡಿಎಸ್‍ ವಿರುದ್ಧ ಈಗಾಗಲೇ ಮುನಿಸಿಕೊಂಡಿರುವ ಶಾಸಕರು, ಇದೀಗ ಮುದ್ದಹನುಮೇಗೌಡ ಪರ ಟ್ವೀಟ್ ಮಾಡುವ ಮೂಲಕ ಜೆಡಿಎಸ್​ ವಿರುದ್ಧ ತಮ್ಮ ಬೇಸರ ಹೊರಹಾಕುತ್ತಿದ್ದಾರೆ.

      ತುಮಕೂರು ಲೋಕಸಭೆ ಕ್ಷೇತ್ರವನ್ನು ಮರಳಿ ಕಾಂಗ್ರೆಸ್‍ ತೆಕ್ಕೆಗೆ ಪಡೆಯುವ ನಿಟ್ಟಿನಲ್ಲಿ ಸಕಲ ಪ್ರಯತ್ನ ನಡೆಯುತ್ತಿದ್ದು, ಹಾಲಿ ಸಂಸದ ಮುದ್ದಹನುಮೇಗೌಡ ಪರ ಕಾಂಗ್ರೆಸ್‍ ನಾಯಕರು ಒಟ್ಟಾಗಿ ಶ್ರಮಿಸುತ್ತಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link