ಬೈಕ್ ಮೇಲೆ ಹರಿದ ಬಸ್ : ವಿದ್ಯಾರ್ಥಿನಿ ಸಾವು!!

ಚಿತ್ರದುರ್ಗ:

      ಬೈಕ್‍ನಲ್ಲಿ ತಂದೆಯೊಂದಿಗೆ ಶಾಲೆಗೆ ಸೇರಲು ತೆರಳುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬಾಲಕಿ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

      ಹುಲ್ಲೂರು ಗ್ರಾಮದ ಅಮೃತಾ (13) ಮೃತ ಬಾಲಕಿ. ಈಕೆ ಇಂದು ಬೆಳಿಗ್ಗೆ ತನ್ನ ತಂದೆ(ಮಂಜುನಾತ್ ರೆಡ್ಡಿ) ಯೊಂದಿಗೆ ಮೊರಾರ್ಜಿ ಶಾಲೆಗೆ ಸೇರಲು ಹೊರಟಿದ್ದಾಗ ನಗರದ ಜೆಎಮ್ ‍ಐಟಿ ವೃತ್ತದ ಬಳಿ ಆಗಮಿಸಿದ ವೇಳೆ ಕೃಷ್ಣಾರೆಡ್ಡಿ ಬೈಕನ್ನು ಯೂಟರ್ನ್ ಮಾಡಲು ಯತ್ನಿಸಿದ್ದಾರೆ. ಅವರ ಎದುರಿಗೆ ಕ್ಯಾಂಟರ್ ವಾಹನವೊಂದು ಬಂದಿದ್ದು, ಪರಿಣಾಮ ನಿಧಾನವಾಗಿ ಚಾಲನೆ ಮಾಡಿದ್ದಾರೆ. ಆದರೆ ಕ್ಯಾಂಟರ್ ಹಿಂದಿನಿಂದ ಬಂದ ಖಾಸಗಿ ಬಸ್ ವೇಗವಾಗಿ ಬಂದಿದ್ದರಿಂದ ಬೈಕಿಗೆ ಡಿಕ್ಕಿಯಾಗಿತ್ತು. ಈ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

       ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‍ನಿಂದ ಕೆಳಗಿ ಬಿದ್ದ ಬಾಲಕಿ ಅಮೃತಾ ಸ್ಥಳದಲ್ಲೇ ಅಸುನೀಗಿದ್ದಾಳೆ. ತೀವ್ರವಾಗಿ ಗಾಯಗೊಂಡಿರುವ  ತಂದೆ ಮಂಜುನಾಥ್ ರೆಡ್ಡಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

 

      ಬಾಲಕಿಯ ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ