ಸಾರಿಗೆ ಸಚಿವರ ಮೇಲೆ ಸಿ.ಎಂ.ಗರಂ

0
24

 ಬೆಂಗಳೂರು:

      ಬೆಂಗಳೂರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಆರೋಪ ಮಾಡಿರುವ ಸಚಿವರ ವಿರುದ್ಧ ಮುಖ್ಯಮಂತ್ರಿಗಳು ಗರಂ ಆಗಿದ್ದಾರೆ.

      ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ದ ಮಾಡಿರುವ ಆರೋಪವನ್ನು ಸಾರಸಗಟಾಗಿ ತಿರಸ್ಕರಿಸುವ ಮೂಲಕ ಬಿಎಂಟಿಸಿ ಅಧಿಕಾರಿ ಪೊನ್ನುರಾಜ್ ಪರ ನಿಂತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ತಮ್ಮ ಮಾವ ಸಾರಿಗೆ ಸಚಿವ ತಮ್ಮಣ್ಣ ಅವರ ವಿರುದ್ದ ಚಾಟಿ ಬೀಸಿದ್ದಾರೆ.

      ಎಲೆಕ್ಟ್ರಿಕ್ ಬಸ್‍ಗಳನ್ನು ಖರೀದಿಸಲು ಮುಂದಾಗಿದ್ದ ಸಾರಿಗೆ ಸಚಿವರ ಕ್ರಮವನ್ನು ವಿರೋಧಿಸಿದ್ದ ಸಾರಿಗೆ ಅಧಿಕಾರಿಯ ಪರ ಬ್ಯಾಂಟಿಂಗ್ ಮಾಡಿರುವ ಮುಖ್ಯಮಂತ್ರಿಗಳು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಪೊನ್ನರಾಜ್ ಅವರ ಮೇಲೆ ನನಗೆ ಅಪಾರವಾದ ವಿಶ್ವಾಸವಿದೆ ಎಂದು ಅಧಿಕಾರಿಗಳ ಮುಂದೆಯೇ ಸಚಿವರನ್ನು ತರಾಟೆಗೆ ತೆಗೆದುಕೊಂಡರು.

      ಹೊಸದಾಗಿ ಎಲೆಕ್ಟ್ರಿಕ್ ಬಸ್‍ಗಳ ಖರೀದಿಸುವುದಕ್ಕಿಂತ ಅವುಗಳನ್ನು ಗುತ್ತಿಗೆ ನೀಡಿ ಬಿಎಂಟಿಸಿಗೆ ಹೊರೆಯಾಗುವುದನ್ನು ತಪ್ಪಿಸಬೇಕಾಗಿದೆ. ಈಗಾಗಲೇ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದು, ಇದಕ್ಕೆ ಹಣವನ್ನು ಹೊಂದಿಸಲು ಕಷ್ಟವಾಗಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಬಸ್‍ಗಳ ಖರೀದಿಸಲು ತನ್ನ ಪಾಲಿನ ಹಣ ನೀಡುತ್ತದೆ ಎಂದು ಬಸ್ ಖರೀದಿಸಿದ್ದೇ ಆದಲ್ಲಿ ಒಂದು ವೇಳೆ ಅವುಗಳು ಕೆಟ್ಟು ನಿಂತರೆ ಇದರ ನಷ್ಟ ಸರ್ಕಾರದ ಮೇಲೆ ಹೊರೆಯಾಗುವುದಿಲ್ಲವೇ? ಎಂದು ಸಚಿವರನ್ನು ಪ್ರಶ್ನಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here