ಬೆಂಗಳೂರು:
ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸುಧಾಕರ್ ಅವರನ್ನು ನೇಮಿಸಿ ಕುಮಾರಸ್ವಾಮಿ ಆದೇಶ ಹೊರಡಿಸಲು ಒಪ್ಪಿಗೆ ಸೂಚಿಸುವ ಮೂಲಕ ಕಾಂಗ್ರೆಸ್‌ನ ಒತ್ತಡಕ್ಕೆ ಮತ್ತೊಮ್ಮೆ ಕುಮಾರಸ್ವಾಮಿ ಮಣಿದಿದ್ದಾರೆ.
ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಕಾಂಗ್ರೆಸ್ ಶಾಸಕ ಸುಧಾಕರ್‌ಗೆ ಕೊನೆಗೂ ಅದೇ ಸ್ಥಾನ ದೊರೆಯಲಿದ್ದು, ನಿನ್ನೆ ನಡೆದ ಸಮನ್ವಯ ಸಮಿತಿ ಸಭೆಯ ಆರಂಭದಲ್ಲೇ ನಿಗಮ ಮಂಡಳಿಗೆ ಬಾಕಿ ಇರುವ ಸ್ಥಾನಗಳಿಗೆ ಅಸ್ತು ಎಂದಿದ್ದಾರೆ.
ತಿಂಗಳ ಹಿಂದೆಯೇ ಕಾಂಗ್ರೆಸ್ ಪಕ್ಷವು 20 ಶಾಸಕರ ನಿಗಮ ಮಂಡಳಿಗಳ ನೇಮಕ ಪಟ್ಟಿಯನ್ನು ಕುಮಾರಸ್ವಾಮಿ ಅವರ ಅಂಕಿತಕ್ಕೆ ಕೊಟ್ಟಿತ್ತು. ಅದರಲ್ಲಿ ಸುಧಾಕರ್ ಹಾಗೂ ಸೋಮಣ್ಣ ಅವರ ಹೆಸರನ್ನು ಬಿಟ್ಟು ಮಿಕ್ಕೆಲ್ಲವುದಕ್ಕೂ ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದರು. ನಂತರ ಸೋಮಣ್ಣ ಅವರಿಗೆ ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಅಂಕಿತಹಾಕಲಾಯಿತಾದರೂ, ಸುಧಾಕರ್ ಅವರ ಸ್ಥಾನಕ್ಕೆ ಇನ್ನೂ ಸಿಎಂ ಅಂಕಿತ ಹಾಕಿರಲಿಲ್ಲ.
ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಮಾಡಿರುವ ಶಿಫಾರಸಿಗೆ ಸಿಎಂ ಕುಮಾರಸ್ವಾಮಿ ಅಂಕಿತ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಸಿಎಂ ಹೆಚ್.ಡಿ.ಕೆ. ಸಮ್ಮಿಶ್ರ ಸರ್ಕಾರದಲ್ಲಿನ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಇದಕ್ಕೆ ಕಾಂಗ್ರೆಸ್ ಹೇರುತ್ತಿದ್ದ ಒತ್ತಡವೇ ಕಾರಣ ಎನ್ನಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ