ಬೆಂಗಳೂರು:
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಚಿವ ಸಂಪುಟ ವಿಸ್ತರಣೆ ನಾಳೆ ಬೆಳಗ್ಗೆ 10:30ಕ್ಕೆ ರಾಜಭವನದಲ್ಲಿ ನಡೆಯಲಿದ್ದು, ಯಾವ ಸಚಿವ ಯಾವ “ಖಾತೆ”ದಾರನಾಗುತ್ತಾರೆ ಅನ್ನೋ ಕುತೂಹಲಕ್ಕೆ ಇಂದೇ ತೆರೆ ಬೀಳಲಿದೆ.
ಸಚಿವರ ಖಾತೆ ಹಂಚಿಕೆ ಪಟ್ಟಿ ಇಂದು ಸಂಜೆ ರಾಜಭವನಕ್ಕೆ ತಲುಪಲಿದ್ದು, ಯಾರು ಯಾರಿಗೆ ಯಾವ್ಯಾವ ಖಾತೆ ಅಂತ ನೂತನ ಸಚಿವರ ಖಾತೆಗಳ ಪಟ್ಟಿಯನ್ನೂ ಸಿಎಂ ಇಂದೇ ಫೈನಲ್ ಮಾಡಲಿದ್ದಾರೆ.
ಇಂದು ಬೆಳಗ್ಗೆ ಬಿಎಸ್‌ವೈಗೆ ದೂರವಾಣಿ ಕರೆ ಮಾಡಿರುವ ಗೃಹ ಸಚಿವ, ಮಾಜಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗುರುವಾರ 10 ಮಂದಿ ಮಾತ್ರ ಪ್ರಮಾಣವಚನ ಸ್ವೀಕರಿಸಲು ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
ನೂತನ ಸಚಿವರ ಸಂಭಾವ್ಯ ಖಾತೆಗಳು:
1. ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ ಖಾತೆ
2. ಎಸ್ ಟಿ ಸೋಮಶೇಖರ್ – ಸಹಕಾರ ಖಾತೆ
3. ಬೈರತಿ ಬಸವರಾಜು – ನಗರಾಭಿವೃದ್ಧಿ ಇಲಾಖೆ
4. ಬಿ.ಸಿ.ಪಾಟೀಲ್ – ಅರಣ್ಯ ಇಲಾಖೆ
5. ಆನಂದ್ ಸಿಂಗ್ – ಯುವಜನ, ಕ್ರೀಡಾ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ
6. ಗೋಪಾಲಯ್ಯ – ಕಾರ್ಮಿಕ ಇಲಾಖೆ
7. ಶಿವರಾಮ್ ಹೆಬ್ಬಾರ್ – ಪೌರಾಡಳಿತ ಇಲಾಖೆ
8. ಶ್ರೀಮಂತ ಪಾಟೀಲ್ – ತೊಟಗಾರಿಕೆ ಇಲಾಖೆ ಮತ್ತು ಸಕ್ಕರೆ ಖಾತೆ
9. ಡಾ.ಕೆ.ಸುಧಾಕರ್ – ವೈದ್ಯಕೀಯ ಇಲಾಖೆ
10. ನಾರಾಯಣ ಗೌಡ – ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ
ಸಚಿವ ಸಂಪುಟಕ್ಕೆ ಉಪ ಚುನಾವಣೆಯಲ್ಲಿ ಗೆದ್ದುಬಂದಿರುವ 10 ಶಾಸಕರು ಹಾಗೂ ಬಿಜೆಪಿಯ ಮೂವರು ಸೇರಿದಂತೆ ಒಟ್ಟು 13 ಮಂದಿ ಸಂಪುಟ ಸೇರ್ಪಡೆಯಾಗುವ ಸುಳಿವನ್ನು ಈ ಹಿಂದೆ ಸಿಎಂ ಯಡಿಯೂರಪ್ಪ ನೀಡಿದ್ದರು. ಆದರೆ ಇಂದು ಬೆಳಗ್ಗೆ ಬಿಎಸ್‌ವೈಗೆ ದೂರವಾಣಿ ಕರೆ ಮಾಡಿರುವ ಗೃಹ ಸಚಿವ, ಮಾಜಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗುರುವಾರ 10 ಮಂದಿ ಮಾತ್ರ ಪ್ರಮಾಣವಚನ ಸ್ವೀಕರಿಸಲು ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ