ಚಿಕ್ಕನಾಯಕನಹಳ್ಳಿ : ಗ್ರಾ.ಪಂ.ಚುನಾವಣೆಗೆ ಅಧಿಕಾರಿಗಳ ನೇಮಕ

 ಚಿಕ್ಕನಾಯಕನಹಳ್ಳಿ  :

      ತಾಲ್ಲೂಕಿನ 27 ಗ್ರಾ.ಪಂ. ಚುನಾವಣೆಗೆ 27 ಜನ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಹಶೀಲ್ದಾರ್ ತೇಜಸ್ವಿನಿ ತಿಳಿಸಿದರು.

      ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು ಗ್ರಾ.ಪಂ. ಚುನಾವಣೆಗೆ ಡಿಸಂಬರ್ 11ರಂದು ದಿನಾಂಕ ನಿಗಧಿಪಡಿಸಿದ್ದು 16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

      ತಾಲ್ಲೂಕಿನ 27 ಗ್ರಾ.ಪಂ.ಗಳಲ್ಲಿ 198 ಮತಗಟ್ಟೆಗಳಿದ್ದು 35 ಹೆಚ್ಚುವರಿ ಮತಗಟ್ಟೆ ಸೇರಿ 233 ಮತಗಟ್ಟೆಗಳಿವೆ, ಈ ಪೈಕಿ 57 ಸೂಕ್ಷ್ಮ, 35 ಅತಿ ಸೂಕ್ಷ್ಮ, ಸಾಮಾನ್ಯ 141 ಮತಗಟ್ಟೆಗಳಿವೆ. ಗ್ರಾ.ಪಂ.ಚುನಾವಣೆಗೆ 1.45.005 ಮತದಾರರಿದ್ದು ಇವರಲ್ಲಿ 72535 ಪುರುಷರು, 72470 ಮಹಿಳೆ ಹಾಗೂ ಒಬ್ಬರು ಇತರೆ ಮತದಾರರಿದ್ದಾರೆ.

      ಚುನಾವಣೆಗೆ ಸಂಬಂಧಪಟ್ಟಂತೆ ಡಿಸಂಬರ್ 26ರಂದು ಮತಗಟ್ಟೆ ಅಧಿಕಾರಿಗಳಿಗೆ ಸಾಮಗ್ರಿಗಳನ್ನು ವಿತರಿಸಲು ಚಿಕ್ಕನಾಯಕನಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್ ನಿಗಧಿಪಡಿಸಿರುತ್ತದೆ, 27ರಂದು ಡಿ-ಮಸ್ಟರಿಂಗ್ ಮತಪೆಟ್ಟಿಗೆ ಸ್ವೀಕರಿಸಲು ನಿಗಧಿಪಡಿಸಿದೆ. 30ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಿಗಧಿಪಡಿಸಲಾಗಿದೆ.

     ಚುನಾವಣೆಗೆ ಸಂಬಂಧಪಟ್ಟ ದೂರುಗಳಿದ್ದರೆ ಸಹಾಯವಾಣಿ 08133-267242 ನಂ.ಗೆ ಕರೆ ಮಾಡುವುದು. ಸಾರ್ವಜನಿಕರ ಮತ್ತು ಸ್ಪರ್ಧಿಗಳ ಅನುಕೂಲಕ್ಕಾಗಿ ತಾಲ್ಲೂಕು ಕಛೇರಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಮತದಾರರ ಸೌಲಭ್ಯ ಕೇಂದ್ರ ಮತ್ತು ದೂರು ನಿರ್ವಹಣಾ ಕೇಂದ್ರ ತೆರೆಯಲಾಗಿದೆ.

      ಚುನಾವಣೆ ಪ್ರಚಾರಕ್ಕಾಗಿ ತಾಲ್ಲೂಕು ಕಛೇರಿಯಲ್ಲಿ ಏಕ-ಗವಾಕ್ಷಿ ಸಮಿತಿಯನ್ನು ನೇಮಕ ಮಾಡಲಾಗಿದೆ, ಕೋವಿಡ್-19 ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಎಸ್.ಓ.ಪಿ ಯಂತೆ ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ದಿನ ಗ್ರಾಮ ಪಂಚಾಯಿತಿ ಆರ್.ಓ ಕಛೇರಿಯನ್ನು ಸ್ಯಾನಿಟೈಸ್ ಮಾಡಿಸಲು ಸಂಬಂಧಪಟ್ಟ ಪಿಡಿಓ ಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಪೊಲಿಸ್ ಸಬ್ ಇನ್ಸ್ ಪೆಕ್ಟರ್ ಹರೀಶ್, ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap