ಚಿತ್ರದುರ್ಗ:
ಬಿಯರ್ ಬಾಟಲಿಯೊಳಗೆ ತಲೆ ಸಿಲುಕಿಸಿಕೊಂಡು ಹೊರಬರಲಾಗದೆ ನಾಗರಹಾವೊಂದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಹೊಸದುರ್ಗ ತಾಲೂಕಿನ ದೇವಪುರ ಬಳಿ ಬಿಯರ್ ಬಾಟಲ್ ನಲ್ಲಿ ನಾಗರಹಾವು ಸಿಲುಕಿದ್ದ ವಿಡಿಯೋ ಹರಿದಾಡುತ್ತಿದೆ.
ಗ್ರಾಮಕ್ಕೆ ಕೆಲವು ಮಂದಿ ಮೋಜು ಮಸ್ತಿಗಾಗಿ ತೆರಳುತ್ತಾರೆ, ಇದೇ ವೇಳೆ ಹೀಗೆ ಹೋಗುವುರರು ಕೈನಲ್ಲಿ ಮದ್ಯಪಾನದ ಬಾಟಲ್‌ಗಳನ್ನು ಹಿಡಿದುಕೊಂಡು ಹೋಗಿ ಎಸೆದಿದ್ದ ಬಿಯರ್ ಬಾಟಲ್‌ಗೆ ನಾಗರಹಾವಿನ ತಲೆ ಸಿಕ್ಕಿ ಹಾಕಿಕೊಂಡಿದೆ. ಇದೇ ವೇಳೆ ಹೀಗೆ ಬಾಟಲ್‌ನೊಳಗೆ ಹಾವು ತನ್ನ ತಲೆಯನ್ನು ಸಿಕ್ಕಿಸಿಕೊಂಡಿರುವುದನ್ನು ನೋಡಿದ ಜನತೆ ಹಾವನ್ನು ಸಾಯಿಸುವುದಕ್ಕೆ ಮುಂದಾಗಿದ್ದಾರೆ. ಕೊನೆಗೆ ಬಾಟಲ್‌ನಿಂದ ಹೊರ ಬಾರಲು ಆಗದೇ, ಮನುಷ್ಯನ ಚಿತ್ರ ಹಿಂಸೆಗೆ ಹಾವು ಸಾವನ್ನಪ್ಪಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ