ಬೆಂಗಳೂರಲ್ಲಿ ಕೊಕೇನ್ ಮಾರಾಟ : ನೈಜೀರಿಯಾ ಪ್ರಜೆಗಳ ಬಂಧನ!!

ಬೆಂಗಳೂರು: 

     ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

     ಕ್ರಿಶ್ಚಿಯನ್ ಓಜೋಮೆನಾ ಚಿಮೆರಿ (20), ಒಕೊಂಕ್ವೊ ಬೆಂಜಮಿನ್ ಚುಕ್ವುಡಿ (30) ಬಂಧಿತ ಆರೋಪಿಗಳು.

     ನಗರದಲ್ಲಿ ಅಕ್ರಮವಾಗಿ ವಾಸ ಮಾಡುವ ನೈಜೀರಿಯಾ ಪ್ರಜೆಗಳ ಮೇಲೆ ಕಣ್ಣಿಡಲು ಸರ್ಕಾರ ಪೊಲೀಸರಿಗೆ ಸೂಚಿಸಿದೆ. ಆದರೂ ನಗರದಲ್ಲಿ ಮಾದಕ‌ ವಸ್ತು ಹಾಗೂ ಕೊಕೇನ್ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ‌ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

     ಬಂಧಿತರಿಂದ 14.5 ಗ್ರಾಂ ತೂಕದ ಕೊಕೇನ್, ಎರಡು ದ್ವಿ ಚಕ್ರ ವಾಹನ, ಮೂರು ಮೊಬೈಲ್ ಫೋನ್‌ ಹಾಗೂ ಒಂದು ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದ್ದು, ವಸ್ತುಗಳ ಮೌಲ್ಯ ಅಂದಾಜು‌ 3‌ಲಕ್ಷ ರೂ.ಗಳಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

     ಆ.10ರಂದು ನಗರದ ಅಗ್ರಹಾರ ಲೇಔಟ್ ನ ಎಂ ಎನ್ ಗೋಕುಲಂ ಅಪಾರ್ಟ್ ಮೆಂಟ್ ಎದುರಿನ ರಸ್ತೆಯಲ್ಲಿರುವ ರಮೇಶ್ ಕೆ ಎಂಬುವವರ ಮನೆಯಲ್ಲಿ ಇಬ್ಬರೂ ನೈಜೀರಿಯಾ ಪ್ರಜೆಗಳು ಕೊಕೇನ್ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

      ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂಧಿತ ಆರೋಪಿಗಳು ತಮ್ಮ ಪರಿಚಿತ ಗಿರಾಕಿಗಳಿಗೆ ಮಾದಕ ವಸ್ತು ಮಾರಾಟ ಮಾಡಿ, ಹಣ ಸಂಪಾದನೆ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ