ದೀರ್ಘ ಕಾಲದ ರಜೆ ಮುಗಿಸಿ ಕಛೇರಿಗೆ ಬಂದಿದ್ದ ನೌಕರನ ಸಾವು!!!

ಬೆಂಗಳೂರು:

     ದೀರ್ಘ ಕಾಲ ರಜೆ ಮುಗಿಸಿಕೊಂಡು ಇಂದು ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಮಗನೊಂದಿಗೆ ಕಾರಿನಲ್ಲಿ ಬಂದಿದ್ದ ನೌಕರ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಲಿಡೋ ಚಿತ್ರಮಂದಿರದ ಬಳಿ ನಡೆದಿದೆ.

     ಹೌದು, ಕಾರಿನ ಮೇಲೆ ಮರ ಬಿದ್ದು ಗಂಭೀರವಾಗಿ ಗಾಯಗೊಂಡು‌ ವ್ಯಕ್ತಿಯೊಬ್ಬ ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.  50 ವರ್ಷದ ಶ್ರೀನಿವಾಸ್ ಮೃತ ದುರ್ದೈವಿ.

    ನಗರದ ಲಿಡೊ ಮಾಲ್ ಮುಂದೆ ಜಲಮಂಡಳಿ ಕಚೇರಿಯಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಗ್ಯಾಂಗ್ರಿನ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಒಳಗಾಗಿ ಒಂದು ಕಾಲನ್ನು ವೈದ್ಯರು ತೆಗೆದಿದ್ದರು. ದೀರ್ಘ ಕಾಲ ರಜೆ ಮುಗಿಸಿಕೊಂಡು ಇಂದು ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಮಗನೊಂದಿಗೆ ಕಾರಿನಲ್ಲಿ ಬಂದಿದ್ದರು.

     ಈ ವೇಳೆಯಲ್ಲಿ ಕಾರಿನ ಮೇಲೆ ಮರ ಬಿದ್ದಿದೆ ಎನ್ನಲಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ