ಬೆಂಗಳೂರು:
ರೈತರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತಿದ್ದ ಅವರು, ರೈತರು ಮಾಡಿರುವ ಸಾಲದ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ನವಂಬರ್ 1 ರಿಂದ ಬಿಡುಗಡೆ ಮಾಡಲಾಗುವುದು. ಮಳೆಯಿಂದ ಮನೆ ಹಾನಿಗೊಳಗಾದ ಕೊಡಗಿನ ಸಂತ್ರಸ್ಥರಿಗೆ ಮನೆ ನಿರ್ಮಿಸಿಕೊಳ್ಳಲು ಮೊದಲ ಬಾರಿಗೆ 1 ಲಕ್ಷ ನೀಡಲು ನಿಗಧಿಗೊಳಿಸಲಾಗಿತ್ತು, ಆದರೆ, ಈಗ ಒಂದು ಮನೆ ನಿರ್ಮಿಸಿಕೊಳ್ಳಲು 10 ಲಕ್ಷ ನೀಡಲಾಗುವುದು. ಅದರಂತೆ ಸಂತ್ರಸ್ಥರಿಗೆ ಒಂದು ಸಾವಿರ ಮನೆ ನಿರ್ಮಾಣಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಕಳೆದ ಐದು ತಿಂಗಳಿನಿಂದ ನಾನು ಟೆಂಪಲ್ ರನ್ ಮಾಡಿಲ್ಲ, ನಮ್ಮದು ಮೊದಲಿನಿಂದಲೂ ದೈವಭಕ್ತಿ ಇರುವ ಕುಟುಂಬ ಹಾಗಾಗಿ ನಾವು ದೇವಾಲಯಕ್ಕೆ ಹೋದರೂ ಸಹ ಅಲ್ಲಿನ ಸಚಿವರನ್ನು ಭೇಟಿಯಾಗುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
