ಬೆಂಗಳೂರು:

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇತ್ತೀಚೆಗೆ ನೀಡಿದ ಶೂಟೌಟ್ ಹೇಳಿಕೆಗೆ ವಿರುದ್ಧ ಆರ್ಟಿಐ ಕಾರ್ಯಕರ್ತರ ನರಸಿಂಹಮೂರ್ತಿ ಎಂಬುವವರು ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಕೇಸು ದಾಖಲಿಸಿದ್ದಾರೆ.
ಡಿ.24 ರಂದು ಮಧ್ಯಾಹ್ನ ಮಂಡ್ಯದ ಮದ್ದೂರಿನಲ್ಲಿ ತೊಪ್ಪಹಳ್ಲಿ ಪ್ರಕಾಶ್ ಅವರನ್ನು ಅವರ ಕಾರಿನಲ್ಲಿಯೇ ಹತ್ಯೆಗೈಯಲಾಗಿತ್ತು. ಪ್ರಕಾಶ್ ಅವರ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡನಾಡುತ್ತಾ ಶೂಟೌಟ್ ಮಾಡಿ ಎಂದು ಹೇಳಿದ್ದರ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮುಂದುವರಿದು, ಇಂದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಖ್ಯಮಂತ್ರಿಯವರ ಶೂಟೌಟ್ ಹೇಳಿಕೆ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಕಾನೂನಿನ ದುರುಪಯೋಗವಾಗುವ ಸಾಧ್ಯತೆಯೂ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








