ರಾಮಲಿಂಗಾರೆಡ್ಡಿ ಮೇಲೆ ಅತೃಪ್ತರ ಆಕ್ರೋಶ!!

ಬೆಂಗಳೂರು:

      ರಾಮಲಿಂಗಾರೆಡ್ಡಿ ನಮಗೆ ಮೋಸ ಮಾಡಿದ್ದಾರೆ ಎಂದು ಮುಂಬೈನಲ್ಲಿರುವ ಅತೃಪ್ತ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಅತೃಪ್ತ ಶಾಸಕರು ಮುಂಬೈನಿಂದ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಅತೃಪ್ತ ಶಾಸಕರಲ್ಲಿ ಒಬ್ಬರಾದ ಸೋಮಶೇಖರ್ ಮಾತನಾಡಿ, ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದ್ದ ರಾಮಲಿಂಗಾರೆಡ್ಡಿ ಇದೀಗ ಹಿಂಪಡೆಯುವ ಕೆಲಸ ಮಾಡಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಅವರನ್ನು ಫಾಲೋ ಮಾಡುವುದಿಲ್ಲ. ಇಂದು ಸದನಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

      ರಾಮಲಿಂಗರೆಡ್ಡಿ ಸೇರಿದಂತೆ ನಾಲ್ವರು ಒಟ್ಟಿಗೆ ಕೂತು ಮಾತನಾಡಿ, ನಾವು ರಾಜೀನಾಮೆಯನ್ನು ಪಡೆದುಕೊಳ್ಳುವುದಿಲ್ಲ ಅಂತ   ಮಾತನಾಡಿಕೊಂಡಿದ್ವಿ. ಆದರೆ ಈಗ ರಾಜೀನಾಮೆಯನ್ನು ಕಾಂಗ್ರೆಸ್‌ ರಾಜಕೀಯನಾಯಕರ ಒತ್ತಡದಿಂದ ರಾಜೀನಾಮೆಯನ್ನು ವಾಪಸ್ಸು ಪಡೆದುಕೊಳ್ಳುವುದಾಗಿ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ