ನಿನ್ನೆ PUC ಪರೀಕ್ಷೆ ಬರೆದ ವಿದ್ಯಾರ್ಥಿನಿ ಮನೆಯವರಿಗೆಲ್ಲಾ ಕೊರೊನಾ ದೃಢ!!

ಬೆಂಗಳೂರು :

     ನಿನ್ನೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದೆ ಎನ್ನಲಾಗಿದೆ.

     ಬೆಂಗಳೂರಿನ ಜಯನಗರ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದರು. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

      ಪರೀಕ್ಷಾ ವರದಿಯಲ್ಲಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.  ಇದೀಗ ಅವರ ಮನೆಯವರಿಗೆಲ್ಲರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

     ಬೆಂಗಳೂರಿನ ಜಯನಗರದಲ್ಲಿ, ಕಳೆದ ನಿನ್ನೆ ನಡೆದಂತ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ಕಂಟೈನ್ಮೆಂಟ್ ಝೋನ್ ನಲ್ಲಿ ಪಿಯು ವಿದ್ಯಾರ್ಥಿನಿಯೊಬ್ಬಳನ್ನು ಹೋಂ ಕ್ವಾರಂಟೈನ್ ನಲ್ಲಿ ಸೀಲ್ ಹಾಕಿ ಇರಿಸಲಾಗಿತ್ತು. ಆದ್ರೇ ಆ ವಿದ್ಯಾರ್ಥಿನಿ ತನ್ನ ಕೈ ಮೇಲಿದ್ದಂತ ಕ್ವಾರಂಟೈನ್ ಸೀಲ್ ಅಳಿಸಿಕೊಂಡು ಪಿಯು ಇಂಗ್ಲೀಷ್ ಪರೀಕ್ಷೆ ಬರೆದಿದ್ದರು ಎನ್ನಲಾಗಿದೆ.

      ಇದೀಗ ಇಂತಹ ವಿದ್ಯಾರ್ಥಿನಿ ಸೇರಿದಂತೆ ಕುಟುಂಬಸ್ಥರ ಕೊರೋನಾ ಲ್ಯಾಬ್ ವರದಿ ಬಂದಿದ್ದು, ಪಿಯು ವಿದ್ಯಾರ್ಥಿನಿ ಸೇರಿದಂತೆ ವಿದ್ಯಾರ್ಥಿನಿ ಅಪ್ಪ, ಅಮ್ಮ ಹಾಗೂ ಇಬ್ಬರು ಮಕ್ಕಳಿಗೆ   ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap