ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 98ಕ್ಕೆ ಏರಿಕೆ!!

ಬೆಂಗಳೂರು :

      ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಸದ್ಯ 98ಕ್ಕೆ ಏರಿಕೆಯಾಗಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ.

      ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು,  ನಿನ್ನೆಯಿಂದ ಇಂದು ಬೆಳಗ್ಗೆಯವರೆಗೆ ರಾಜ್ಯದಲ್ಲಿ 10 ಮಂದಿಯಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ. ಈ ಹತ್ತು ಮಂದಿ ಪೈಕಿ ಬೆಂಗಳೂರಿನ ಇಬ್ಬರು, ಗೌರಿಬಿದನೂರಿನಲ್ಲಿ ಒಬ್ಬರು, ಮೈಸೂರಿನಲ್ಲಿ ಇಬ್ಬರು, ಮಂಗಳೂರಿನಲ್ಲಿ ಇಬ್ಬರು ಸೋಂಕಿತರಿದ್ದು, ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

       ರಾಜ್ಯದಲ್ಲಿ  ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದ 6 ಜನ ಗುಣಮುಖರಾಗಿದ್ದು, 3 ಜನ ಪ್ರಾಣ ಕಳೆದುಕೊಂಡಿದ್ದಾರೆ. 25 ಸಾವಿರಕ್ಕೂ ಹೆಚ್ಚು ಜನರನ್ನು ‌ಗುರುತಿಸಿ 3 ಸಾವಿರ ಸ್ಯಾಂಪಲ್ ‌ಕಲೆಕ್ಷನ್ ಮಾಡಿದ್ದೇವೆ. ಅದರಲ್ಲಿ ಇ‌್ನೂ 133 ಜನರ ವರದಿ ಬರಬೇಕಿದೆ. 33 ಸಾವಿರ ಜನರನ್ನು ನಿರೀಕ್ಷಣೆಯಲ್ಲಿಟ್ಟಿದ್ದೇವೆ. 226 ಜನರು ಐಸೋಲೇಷನ್ ವಾರ್ಡ್ ‌ನಲ್ಲಿದ್ದಾರೆಂದು ತಿಳಿಸಿದರು.

      ಇಂದು ಹೊಸಪೇಟೆಯಲ್ಲಿ ‌ಮೂರು ಪಾಸಿಟಿವ್ ಬಂದಿದೆ. ಇದರಿಂದ ಅಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸೋಂಕಿತರ ಟ್ರಾವೆಲ್ ಹಿಸ್ಟರ್ ನೋಡ್ತಿದ್ದೇವೆ. ಮನೆಯ ಸುತ್ತಲೂ ಬಫೋರ್ ಝೋನ್ ಘೋಷಣೆ ಮಾಡಿದೆ. ಇಡೀ ಪಟ್ಟಣವನ್ನು ಹೋಮ್ ಕ್ವಾರಂಟೈನ್ ಮಾಡಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

Recent Articles

spot_img

Related Stories

Share via
Copy link