ನವದೆಹಲಿ :
ದೆಹಲಿ ಮಯೂರ್ ವಿಹಾರದಲ್ಲಿರುವ ಸಿಆರ್ ಪಿಎಫ್ ನಎಫ್ 31ನೇ ಬೆಟಾಲಿಯನ್ ಪಡೆಯಲ್ಲಿ ಕೆಲ ದಿನಗಳಿಂದ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇಲ್ಲಿನ 46 ಯೋಧರಲ್ಲಿ ಸೋಂಕು ಪಾಸಿಟಿವ್ ಬಂದಿದೆ.
ಮಾರಣಾಂತಿಕ ಕೊರೊನಾ ಸೋಂಕು ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದು, ಈ ಸೋಂಕು ಭಾರತೀಯ ಯೋಧರ ದೇಹಕ್ಕೂ ದಾಳಿ ಇಡಲು ಶುರು ಮಾಡಿದೆ. ದೆಹಲಿಯಲ್ಲಿ ಮಾರಕ ಕೊರೊನಾ ವೈರಸ್ ಆತಂಕ ಸಿಆರ್ ಪಿಎಫ್ ಬೆಟಾಲಿಯನ್ ನ 46 ಯೋಧರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಏತನ್ಮಧ್ಯೆ, ಏ.21 ರಂದು ಸೋಂಕು ದೃಢಪಟ್ಟಿದ್ದ 55 ವರ್ಷದ ಯೋಧನಿಗೆ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಯೋಧರ ಸಂಪರ್ಕದಲ್ಲಿದ್ದ 1,000ಕ್ಕೂ ಹೆಚ್ಚು ಯೋಧರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ. ಅಲ್ಲದೇ, ಸ್ಥಳದಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಮಾರಣಾಂತಿಕ ಸೋಂಕಿಗೆ ತುತ್ತಾಗಿರುವ ಯೋಧರಿಗೆ ಮಂಡ್ವಾಲಿಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತಷ್ಟು ಯೋಧರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ