ಬಿಗ್ ಶಾಕ್ : ಮಟನ್ – ಫಿಶ್ ಬೆಲೆಯಲ್ಲಿ ಭಾರೀ ಏರಿಕೆ!!

ಬೆಂಗಳೂರು : 

      ಮಾರಣಾಂತಿಕ ಕೊರೊನಾ ವೈರಸ್ ಮಾಂಸಾಹಾರ ಪ್ರಿಯರಿಗೆ ಬಿಗ್ ಶಾಕ್ ನೀಡಿದ್ದು, ಮಟನ್ ಮತ್ತು ಫಿಶ್ ಬೆಲೆ ಗಗನ್ನಕೇರಿದೆ.

      ಹೌದು, ಕೊರೊನಾ ವೈರಸ್ ಭೀತಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಹಿವಾಟಿನ ಮೇಲೆ ಭಾರಿ ಪ್ರಭಾವ ಬೀರಿದೆ. ಕಳೆದ ವಾರ ಕೆಜಿ ಮಟನ್ ಗೆ 500 ರೂ. ನಿಂದ 550 ರೂ.ಗೆ ಇತ್ತು. ಆದರೆ ಕೆಜಿ ಮಟನ್ ಬೆಲೆ ಏಕಾಏಕಿ 700 ರೂ.ಗೆ ಏರಿಕೆಯಾಗಿದೆ. ಕಳೆದ ವಾರ ಫಿಶ್ ಬೆಲೆ ಕೆಜಿಗೆ 120 ರೂ. ಇದ್ದದ್ದು, ಇದೀಗ 200 ರೂ. ತಲುಪಿದೆ.

      ಕೋಳಿ ತಿಂದರೆ ಕೊರೊನಾ ವೈರಸ್ ಬರುತ್ತೆ ಅಂತ ಇತ್ತೀಚೆಗೆ ಕೆಲವರು ಸೋಷಿಯಲ್ ಮಿಡಿಯಾದಲ್ಲಿ ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಈ ಫೇಕ್ ಸುದ್ದಿಗೆ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿದೆ. ಹೀಗಾಗಿ ಜನರು ಕೋಳಿ ಮಾಂಸ ತಿನ್ನುವುದನ್ನೇ ಬಿಡುತ್ತಿದ್ದಾರೆ. ಇದರಿಂದ ಚಿಕನ್ ಬೇಡಿಕೆ ಕಡಿಮೆಯಾಗಿದೆ. 130, 140 ಇದ್ದ ಚಿಕನ್ ರೇಟ್ 80, 90ಕ್ಕೆ ಇಳಿದಿದೆ. ಇದರಿಂದ ಮಟನ್ ಹಾಗೂ ಫಿಶ್ ರೇಟ್ ಹೆಚ್ಚಾಗಿದೆ.

      ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ತರಕಾರಿ ಬೆಲೆಗಳು ಪಾತಾಳಕ್ಕೆ ಕುಸಿದಿದೆ. ಆದರೆ ಮಟನ್ ಮತ್ತು ಫಿಶ್ ಬೆಲೆ ಗಗನಕ್ಕೇರಿದ್ದು, ನಾನ್ ವೆಜ್ ಪ್ರಿಯರ ಜೇಬಿಗೆ ಕತ್ತರಿ ಬೀಳುವುದು ಪಕ್ಕಾ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap