ಕೊರೊನಾ : ಒಂದೇ ಮಹಡಿಯಲ್ಲಿ ಬಿಎಸ್ವೈ-ಸಿದ್ದುಗೆ ಚಿಕಿತ್ಸೆ!!

ಬೆಂಗಳೂರು: 

     ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೋವಿಡ್​ 19 ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದ್ದು, ಸದ್ಯ ಅವರು ಸಿಎಂ ಬಿಎಸ್​ವೈ ಇರುವ ಆಸ್ಪತ್ರೆಯಲ್ಲೇ ಕೋವಿಡ್​ಗಾಗಿ ಮಾಡಲಾಗಿದ್ದ ಐಸೋಲೆಟೆಡ್​ ವಾರ್ಡ್​ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

     ಮೂತ್ರನಾಳದ ಸಮಸ್ಯೆಯಿಂದ ಬಳಲುತ್ತಿರುವ ಸಿದ್ದರಾಮಯ್ಯ ಅವರಿಗೆ ಎರಡು ದಿನಗಳಿಂದ ಜ್ವರ ಕೂಡಾ ಇತ್ತು. ಈ ಹಿನ್ನೆಲೆ ವೈದ್ಯರ ಸೂಚನೆಯಂತೆ ನಗರದ ಮಣಿಪಾಲ ಆಸ್ಪತ್ರೆಗೆ ಸೋಮವಾರ ರಾತ್ರಿ ದಾಖಲಾಗಿದ್ದಾರೆ.

      ಮಂಗಳವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದೇನೆ. ಯಾವುದೇ ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

     ಮಣಿಪಾಲ ಆಸ್ಪತ್ರೆಯ ಒಂದೇ ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಯಡಿಯೂರಪ್ಪ ಒಂದೇ ಮಹಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಕೂಡ ಮಣಿಪಾಲ ಆಸ್ಪತ್ರೆಯ 11ನೇ ಮಹಡಿಯ ಕೊಠಡಿ ಸಂಖ್ಯೆ 1166ರಲ್ಲಿ ಯಡಿಯೂರಪ್ಪ ಹಾಗೂ 1171ನೇ ಕೊಠಡಿಯಲ್ಲಿ ಸಿದ್ದರಾಮಯ್ಯ ಚಿಕಿತ್ಸೆಗೆ ದಾಖಲಾಗಿದ್ದಾರೆ.

 

Recent Articles

spot_img

Related Stories

Share via
Copy link