ಮೈಸೂರು :
ಮೈಸೂರು ಅರಮನೆ ನೋಡಲು ಹೋಗುವ ಪ್ರವಾಸಿಗರಿಗೆ ಇನ್ಮುಂದೆ ಕೋವಿಡ್-19 ಪರೀಕ್ಷೆ ಕಡ್ಡಾಯ ಮಾಡಲಾಗಿದೆ.
ಬುಧವಾರ 6 ಜನ ಪ್ರವಾಸಿಗರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಬಳಿಕ ಮೈಸೂರು ಅರಮನೆ ಮಂಡಳಿ ಈ ನಿರ್ಧಾರ ಕೈಗೊಂಡಿದ್ದು, ಅರಮನೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಇನ್ಮುಂದೆ ಅರಮನೆ ಪ್ರವೇಶಕ್ಕೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ ಎಂದು ಮೈಸೂರು ಅರಮನೆ ಮಂಡಳಿ ತಿಳಿಸಿದೆ.
ಮೈಸೂರು ಅರಮನೆ ಮಂಡಳಿ ಉಪಾಧ್ಯಕ್ಷ ಟಿ.ಎಸ್. ಸುಬ್ರಹ್ಮಣ್ಯ ಈ ಕುರಿತು ಮಾಹಿತಿ ನೀಡಿದ್ದು, ಅರಮನೆ ಟಿಕೆಟ್ ಕೌಂಟರ್ ಬಳಿ ಪ್ರವಾಸಿಗರಿಗೆ ತ್ವರಿತ ಆಂಟಿಜೆನ್ ಟೆಸ್ಟ್ ನಡೆಸಲು ಹೆಚ್ಚಿನ ಸಂಖ್ಯೆಯ ತಂಡಗಳನ್ನು ನಿಯೋಜಿಸಲು ಅರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಅವರು ನೀಡುವ ಫಲಿತಾಂಶ ಆಧರಿಸಿ ಪ್ರೇಕ್ಷಕರನ್ನು ಅರಮನೆ ಒಳಗಡೆ ಬಿಡಲಾಗುವುದು. ಪರೀಕ್ಷೆ ಮಾಡಿಸಿಕೊಳ್ಳಲು ಬೆಳಗ್ಗೆ 6.30 ರಿಂದ ಸಂಜೆ 5ರವರೆಗೂ ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಇನ್ನು, ಕೊರೊನಾ ವೈರಸ್ ಭೀತಿಯಿಂದಲೇ ಈ ಬಾರಿಯ ಮೈಸೂರು ದಸರಾವನ್ನು ಸರಳವಾಗಿ ನಡೆಸಲಾಯಿತು. ದಸರಾಗೆ ನಿರ್ಬಂಧವಿದ್ದರೂ ಬೇರೆ ಪ್ರವಾಸು ಸ್ಥಳಗಲ್ಲಿ ಪ್ರವಾಸಿಗರ ದಂಡೇ ಹರಿದುಬಂದಿತ್ತು. ಇದು ಕೂಡ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
