ಕೈಕಾಲು ಕಟ್ಟಿ ವೃದ್ಧ ದಂಪತಿಗಳ ಬರ್ಬರ ಹತ್ಯೆ!!

ಕಾರವಾರ: 

      ಕೈಕಾಲು ಕಟ್ಟಿ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಅಂಕೋಲಾ ತಾಲ್ಲೂಕಿನ ಮೊಗಟಾ ಗ್ರಾಮದ ಆನ್ಲೆಯಲ್ಲಿ ನಡೆದಿದೆ.

      ನಾರಾಯಣ ಬೊಮ್ಮಯ್ಯ ನಾಯ್ಕ (84) ಮತ್ತು ಸಾವಿತ್ರಿ ನಾಯ್ಕ (78) ಕೊಲೆಯಾದ ದಂಪತಿ. ಮನೆಯಲ್ಲಿ ರಾತ್ರಿ ವೇಳೆ ಇಬ್ಬರೇ ಇದ್ದ ಸಂದರ್ಭದಲ್ಲಿ ದಂಪತಿಯನ್ನು ಕಟ್ಟಿಹಾಕಿ ಹತ್ಯೆ ನಡೆಸಲಾಗಿದ್ದು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನ ಸಹ ದೋಚಿಕೊಂಡು ಹೋಗಲಾಗಿದೆ.

     ಅವರ ಶವಗಳು ಕೈಕಾಲು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೃತ್ಯ ನಡೆದ ಮನೆಯಲ್ಲಿ ಅವರಿಬ್ಬರೇ ವಾಸ ಮಾಡುತ್ತಿದ್ದರು ಎನ್ನಲಾಗಿದ್ದು, ಕೊಲೆಯಾದ ದಂಪತಿ ಬಳಿ ತೋಟ ಹಾಗೂ ಅಪಾರ ಆಸ್ತಿ ಇದ್ದು  ಆಸ್ತಿಗಾಗಿಯೇ ಹತ್ಯೆ ಮಾಡಲಾಗಿದೆಯಾ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ.

     ಈ ಸಂಬಂಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ