ಉಡುಪಿ :
ಮನೆಯ ನಿರುಪಯುಕ್ತ ಶೆಡ್ ಒಳಗಡೆ ಎರಡು ಹೆಬ್ಬಾವುಗಳು ಮತ್ತು ಅವುಗಳ 31 ಮೊಟ್ಟೆಗಳು ಪತ್ತೆಯಾಗಿರುವ ಘಟನೆ ಉಡುಪಿಯ ಕಟಪಾಡಿಯಲ್ಲಿ ನಡೆದಿದೆ.
ಕಟಪಾಡಿ ವಿಶ್ವನಾಥ ಕ್ಷೇತ್ರ ಸಮೀಪ ರಾಮಚಂದ್ರ ಪೈ ಎಂಬುವರ ಹಳೆಯ ಹಟ್ಟಿ ಕೊಟ್ಟಿಗೆಯಲ್ಲಿ ಭಾರಿ ಗಾತ್ರದ ಎರಡು ಹೆಬ್ಬಾವುಗಳು ಮೊಟ್ಟೆಗಳಿಗೆ ಕಾವು ಕೊಡುತ್ತಿದ್ದವು. ಇದನ್ನು ಗಮನಿಸಿದ ರಾಮಚಂದ್ರ ಪೈ ಉರಗ ತಜ್ಞರಾದ ಮನು ಪೈ ಅವರಿಗೆ ವಿಷಯ ತಿಳಿಸಿದ್ದಾರೆ.
ಮನು ಪೈ ಅವರು ಹೆಬ್ಬಾವುಗಳನ್ನು ಹಿಡಿದು ಒಂದು ಹೆಬ್ಬಾವಿನ 16 ಮತ್ತು ಇನ್ನೊಂದು ಹೆಬ್ಬಾವಿನ 16 ಮೊಟ್ಟೆಗಳನ್ನು ಪ್ರತ್ಯೇಕ ಗೊಳಿಸಿ ಎರಡೂ ಹೆಬ್ಬಾವುಗಳನ್ನು ಅರಣ್ಯ ಇಲಾಖಾಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ