ಕೋವಿಡ್‌ ಭೀತಿ : ಬೆಂಗಳೂರಿನ ಚಿಕ್ಕಪೇಟೆ, ಕನಕಪುರ ಲಾಕ್ ಡೌನ್!!

ಬೆಂಗಳೂರು:

     ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಚಿಕ್ಕಪೇಟೆ ಮತ್ತು ರಾಮನಗರ ಜಿಲ್ಲಾ ವ್ಯಾಪ್ತಿಯ ಕನಕಪುರ ಟೌನ್ ಅನ್ನು ಸ್ವಯಂಪ್ರೇರಿತವಾಗಿ ಒಂದು ವಾರ/ 9 ದಿನ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ.

      ಚಿಕ್ಕಪೇಟೆ ಭಾಗದಲ್ಲಿ 25 ಮಂದಿಗೆ ಕೊರೊನಾ ಸೋಂಕು ತಗುಲಿದೆ.  ಇನ್ನು ಕನಕಪುರ ಟೌನ್ ಅನ್ನು ನಾಳೆಯಿಂದ, ಒಂಬತ್ತು ದಿನಗಳ ಕಾಲ (ಜೂನ್ 30ರವರೆಗೆ) ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಸ್ಥಳೀಯ ಶಾಸಕ ಮತ್ತು ಕೆಪಿಸಿಸಿ ನಿಯೋಜಿತ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

     ಚಿಕ್ಕಪೇಟೆಯಲ್ಲಿನ ಸುಮಾರು 8 ರಿಂದ 10 ವ್ಯಾಪಾರಿ ಸಂಘಗಳು ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಚಿಕ್ಕಪೇಟೆ ಮಾರುಕಟ್ಟೆ ನಾಳೆಯಿಂದ ಮುಂದಿನ ಭಾನುವಾರದವರೆಗೆ ಬಂದ್ ಮಾಡಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ.

      ಮಾರುಕಟ್ಟೆ ಬಂದ್ ಮಾಡಲು ಎಲೆಕ್ಟ್ರಿಕ್ ಮರ್ಚೆಂಟ್ ಅಸೋಸಿಯೇಷನ್, ಜ್ಯುವೆಲರಿ ಅಸೋಸಿಯೇಷನ್, ಸಿಲ್ವರ್ ಅಂಡ್ ಗೋಲ್ಡ್ ತಯಾರಕರು, ಸ್ವರ್ಣಕಾರ್ ಅಸೋಸಿಯೇಷನ್, ಜೆಮ್ಸ್ & ಪಲ್ರ್ಸ್ ಅಸೋಸಿಯೇಷನ್, ಸಿಲ್ಕ್ ಕ್ಲಾತ್ ಅಸೋಸಿಯೇಷನ್, ಸ್ವಿಚ್ ಗೇರ್ ಅಸೋಸಿಯೇಷನ್, ಹಾರ್ಡ್ ವೇರ್ ಅಸೋಸಿಯೇಷನ್ ಬೆಂಬಲ ನೀಡಿದ್ದಾರೆ.

     ‘ಚಿಕ್ಕಪೇಟೆಯು ಎಲ್ಲ ಬಗೆಯ ವಸ್ತುಗಳ ಸಗಟು ವ್ಯಾಪಾರಕ್ಕೆ ಹೆಸರಾಗಿರುವುದರಿಂದ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ಭಾಗಗಳ ಗ್ರಾಹಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳುವುದು ಕಷ್ಟ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap