ಹುಬ್ಬಳ್ಳಿಯಲ್ಲಿ ಕೊರೊನಾ ಪರೀಕ್ಷಾ ಕೇಂದ್ರ ; 24 ಗಂಟೆಯಲ್ಲಿ ವರದಿ!!

ಹುಬ್ಬಳ್ಳಿ :

       ಹುಬ್ಬಳ್ಳಿಯ ಕಿಮ್ಸ್ ಅಸ್ಪತ್ರೆಯಲ್ಲಿ ಇಂದಿನಿಂದ ಕೊರೊನಾ ವೈರಸ್ ಪರೀಕ್ಷಾ ಕೇಂದ್ರ ಆರಂಭಿಸಲು ಐ.ಸಿ.ಎಂ.ಆರ್. (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸೆಂಟರ್) ಒಪ್ಪಿಗೆ ನೀಡಿದೆ. 

       ಇಂದಿನಿಂದ ಕಿಮ್ಸ್ ನಲ್ಲಿ ಸಾರ್ಸ ಕೋ ವಿ-2 ವೈರಾಣು ಪತ್ತೆ ಪರೀಕ್ಷೆಯನ್ನು ಮಾಡಲಾಗುವುದು. ಗಂಟಲು ದ್ರವ ಮಾದರಿ ಸಂಗ್ರಹಣ ಬೂತ್ ಹಾಗೂ ಮೈಕ್ರೋಬಯಲಾಜಿ ವಿಭಾಗದಲ್ಲಿ ಕರೊನಾ ಪರೀಕ್ಷೆ ಮಾಡಲಾಗುತ್ತದೆ. ಹಿಗಾಗಿ 24 ಗಂಟೆಗಳಲ್ಲೇ ಕೊರೊನಾ ಪರೀಕ್ಷೆ ವರದಿ ದೊರಕಲಿದೆ. ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.       

    ಹುಬ್ಬಳ್ಳಿಯಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರವನ್ನು ಆರಂಭಿಸಿರುವುದರಿಂದ ಉತ್ತರ ಕರ್ನಾಟಕ ಜಿಲ್ಲೆಗಳ ವರದಿಗಳನ್ನು ಶೀಘ್ರವಾಗಿ ಪಡೆಯಬಹುದಾಗಿದೆ. ಬೆಂಗಳೂರು ಮತ್ತು ಶಿವಮೊಗ್ಗಕ್ಕೆ ಮಾದರಿಗಳನ್ನು ಕಳುಹಿಸಿ ವರದಿಗಾಗಿ ಕಾಯುವುದು ಇನ್ಮುಂದೆ ತಪ್ಪಲಿದೆ.

      ಸದ್ಯ ಒಂದು ದಿನಕ್ಕೆ 40 ಮಾದರಿಗಳ ಪರೀಕ್ಷೆ ಮಾಡುವ ಸಾಮಾರ್ಥ್ಯವಿದ್ದು, ಇನ್ನು ಪರೀಕ್ಷಾ ಕೇಂದ್ರಗಳಲ್ಲಿ 3 ಜನ ಸೂಕ್ಷ್ಮ ಜೀವಾಣು ತಜ್ಞರು ಕಾರ್ಯನಿರ್ವಹಣೆ ಮಾಡಲಿದ್ದಾರೆ. ಅವರ ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದ ಇಬ್ಬರು ಸೂಕ್ಷ್ಮ ಜೀವಾಣು ತಜ್ಞರ ಸೇವೆಯನ್ನು ಪಡೆಯಲು ನಿರ್ಧಾರ ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link