ಮೈಸೂರು :
ಸಾಂಸ್ಕೃತಿಕ ನಗರಿ ಮೈಸೂರಿಗೆ ಕಲಶದಂತಿದ್ದ ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಈಗ ಬಿರುಕು ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ.
ನಂದಿ ವಿಗ್ರಹ ಬಿರುಕು ಬಿಟ್ಟಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪಾರಂಪರಿಕ ತಜ್ಞರ ಸಮಿತಿಯನ್ನು ರಚಿಸಿ ವಿಗ್ರಹ ಪರಿಶೀಲನೆಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ಶಿಲ್ಪಿ ತಂಡ ವಿಗ್ರಹ ಪರಿಶೀಲನೆ ನಡೆಸಿದೆ.
ಕೆಲವು ಕಡೆ ಬಿರುಕು ಬಿಟ್ಟಿರುವ ರೀತಿ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ ಅದು ಬಿರುಕಲ್ಲ, ಕಲ್ಲಿನ ನೈಜತೆ ಎಂದು ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಸಮಿತಿ ವರದಿ ನೀಡಲಿದ್ದು, ಬಿರುಕು ಬಿಟ್ಟಿದೆ ಎಂದು ತಜ್ಞರು ಸ್ಪಷ್ಟಪಡಿಸಿದರೆ ಅದನ್ನು ಮುಚ್ಚಲು ಕೂಡ ಜಿಲ್ಲಾಡಳಿತ ಮುಂದಾಗಲಿದೆ.
ಇತ್ತೀಚೆಗೆ ನಂದಿ ವಿಗ್ರಹವನ್ನು ಪಾಲಿಷ್ ಮಾಡಲಾಗಿತ್ತು. ಬಿರುಕು ಮೂಡಲು ಪಾಲಿಷ್ಗೆ ಬಳಕೆ ಮಾಡಿರುವ ಕಾರಣ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಇದು ತಜ್ಞರ ಅಧ್ಯಯನದ ನಂತರವೇ ತಿಳಿದು ಬರಬೇಕಿದೆ.
ಸುಮಾರು 400 ವರ್ಷಗಳ ಹಿಂದೆ ನಂದಿ ವಿಗ್ರಹ ನಿರ್ಮಾಣ ಮಾಡಲಾಗಿತ್ತು. ವಿಗ್ರಹ 25 ಅಡಿ ಉದ್ದ ಇದೆ. ಈ ನಂದಿ ಚಾಮುಂಡಿ ಬೆಟ್ಟದ ಪ್ರಮುಖ ಆಕರ್ಷಣೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ