ಬೆಂಗಳೂರು:
ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಆದೇಶಿಸಿದೆ.
ಕಸದ ಸಮಸ್ಯೆ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎನ್. ಸುಜಾತಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿ ಆದೇಶ ಹೊರಡಿಸಿದೆ.
“ಬೆಂಗಳೂರನ್ನು ಸ್ವಚ್ಛಗೊಳಿಸಲು ಬಿಬಿಎಂಪಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು.ಕಸ ವಿಲೇವಾರಿ ಭರದಿಂದ ಸಾಗಿದೆ. ಹಾಗೆ ಸ್ವಚ್ಚ ಮಾಡಿದ ಜಾಗದಲ್ಲಿ ಪೌರ ಕಾರ್ಮಿಕರು ರಂಗೋಲಿ ಹಾಕುತ್ತಿದ್ದಾರೆ. ಆದರೆ ಕೆಲವರು ರಂಗೋಲಿಯ ಮೇಲೆಯೂ ಕಸ ಎಸೆಯುತ್ತಿದ್ದಾರೆ” ಎಂದು ಬಿಬಿಎಂಪಿ ಪರ ವಕೀಲ ಡಿ.ಎನ್. ನಂಜುಂಡ ರೆಡ್ಡಿ ಹೇಳಿದಾಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ ಎಲ್ಲಾದರಲ್ಲಿ ಕಸ ಚೆಲ್ಲುವವರ ವಿರುದ್ಧ ಪೌರಾಡಳಿತ ಕಾಯ್ದೆಯ ಅನುಸಾರ ಕ್ರಮ ತೆಗೆದುಕೊಳ್ಳಿ. ಈ ಕುರಿತು ಬಿಬಿಎಂಪಿ ಸಭೆಗಳಲ್ಲಿ ಚರ್ಚಿಸಿ ಎಂದು ತಾಕೀತು ಮಾಡಿದೆ ಎಂದು ತಿಳಿದು ಬಂದಿದೆ .