ಟೈರ್ ಸ್ಫೋಟಗೊಂಡು ಕ್ರೂಸರ್ ಪಲ್ಟಿ : ಇಬ್ಬರ ಸಾವು!!

ಕಲಬುರಗಿ:

      ಟೈರ್ ಸ್ಫೋಟಗೊಂಡು ಕ್ರೂಸರ್ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಂಚೋಳಿ ತಾಲೂಕಿನ ಯಲಮಾಮಡಿ ಸಮೀಪ‌ ಸೋಮವಾರ ನಡೆದಿದೆ.

      ಯಲಮಾಮಡಿ ಪುನರ್ವಸತಿ ಕೇಂದ್ರ-2ರ ನಿವಾಸಿ ಶಾಮರಾವ್​(65) ಹಾಗೂ ಯಲಮಾಮಡಿ ತಾಂಡಾ ನಿವಾಸಿ ಮೋತಿಬಾಯಿ(55) ಮೃತ ದುರ್ದೈವಿಗಳು. 

      ಘಟನೆಯಲ್ಲಿ 10 ಜನರಿಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿ ಹಾಗೂ ಬೀದರ್​​ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

      ಘಟನೆಗೆ ಸಂಬಂಧಿಸಿದಂತೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap