ಮಂಗಳೂರು :

ಮಂಗಳೂರಿನಲ್ಲಿ ಇಂದು ಕರ್ಪ್ಯೂ ತೆರವು ಮಾಡಲಾಗಿದ್ದು, ಶಾಲಾ-ಕಾಲೇಜುಗಳು ಇಂದಿನಿಂದ ಪ್ರಾರಂಭವಾಗಲಿವೆ.
ಹಿಂಸಾಚಾರದಿಂದ ನಲುಗಿದ್ದ ಮಂಗಳೂರು ನಗರದಲ್ಲಿ ಬೆಳಗ್ಗೆ 6 ಗಂಟೆಗೆ ಕರ್ಪ್ಯೂ ಮುಕ್ತಾಯವಾಗಿದ್ದು, ಇಂದಿನಿಂದ ಶಾಲಾ-ಕಾಲೇಜುಗಳು ಆರಂಭವಾಗಿವೆ. ಎಲ್ಲಾ ಸರ್ಕಾರಿ ಖಾಸಗಿ ಕಚೇರಿಗಳಿಗೂ ತೆರೆದುಕೊಳ್ಳಲಿವೆ. ಕರ್ಪ್ಯೂ ಸಡಿಲಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಜನ ಮಾರುಕಟ್ಟೆಯತ್ತ ಆಗಮಿಸುತ್ತಿದ್ದಾರೆ. ಹಾಗಾಗಿ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದ ಮಂದಿ ನಿಟ್ಟುಸಿರು ಬಿಡುವಂತಾಗಿದೆ. ಆದರೆ,144 ಸೆಕ್ಷನ್ ಮುಂದುವರಿದಿದೆ.
144 ಸೆಕ್ಷನ್ ಜಾರಿಯಲ್ಲಿರುವುದರಿಂದ ಯಾರೂ ಅಕ್ರಮ ಕೂಟ, ನಾಲ್ವರಿಗಿಂತ ಹೆಚ್ಚು ಜನ ಸೇರುವುದು, ಪ್ರತಿಭಟನೆ, ಗಲಾಟೆ ನಡೆಸುವಂತಿಲ್ಲ. ಅಲ್ಲದೆ ಶಸ್ತ್ರಾಸ್ತ್ರ, ಕತ್ತಿ, ದೊಣ್ಣೆ, ಬಂದೂಕು ಸೇರಿದಂತೆ ಯಾವುದೇ ಮಾರಕಾಯುಧ ಕೊಂಡೊಯ್ಯುವಂತಿಲ್ಲ. ಪಟಾಕಿ ಸಿಡಿಸುವುದು, ಮೆರವಣಿಗೆ, ವಿಜಯೋತ್ಸವ, ರಸ್ತೆತಡೆ, ಮುಷ್ಕರ ನಡೆಸುವುದನ್ನೂ ನಿಷೇಧಿಸಲಾಗಿದೆ. ಜೊತೆಗೆ ಪ್ರತಿಕೃತಿ ಪ್ರದರ್ಶಿಸುವುದು, ಸಾರ್ವಜನಿಕ ಸುವ್ಯಸ್ಥೆಗೆ ಭಂಗ ತರುವಂತಹ, ಅಪರಾಧಕ್ಕೆ ಪ್ರಚೋದನೆ ನೀಡುವ ಘೋಷಣೆ, ಭಿತ್ತಿಪತ್ರಗಳನ್ನು ಅಂಟಿಸುವುದಕ್ಕೂ ಬ್ರೇಕ್ ಹಾಕಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








