ಆನೇಕಲ್ :

ಭೂಮಿ ಪೂಜೆಗಾಗಿ ಶಾಮಿಯಾನ ಹಾಕುತ್ತಿದ್ದಾಗ, ಕಬ್ಬಿಣದ ಕಂಬ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್‍ನ ಇಂಡ್ಕಬೆಲೆಯಲ್ಲಿ ನಡೆದಿದೆ.
ಆಕಾಶ್ (30), ಮಹದೇವ (35), ವಿಷಕಂಠ (35) ಮತ್ತು ವಿಜಯ್‍ಸಿಂಗ್ (30) ಮೃತಪಟ್ಟವರು.
ಅಪಾರ್ಟ್‍ಮೆಂಟ್ ನಿರ್ಮಿಸಲು ನಾಳೆ ಭೂಮಿ ಪೂಜೆ ಮಾಡಲು ಇಂದು ಮಧ್ಯಾಹ್ನ ಶಾಮಿಯಾನ ಹಾಕಲಾಗುತ್ತಿತ್ತು. ಈ ನಾಲ್ವರೂ ನಾಳೆ(ಗುರುವಾರ) ಅಪಾರ್ಟ್‍ಮೆಂಟ್ ನಿರ್ಗೆಮಾ ಲೈಟಿಂಗ್ಸ್ ಅಳವಡಿಸುತ್ತಿದ್ದರು. ಆ ಸಂದರ್ಭದಲ್ಲಿ ಶಾಮಿಯಾನಕ್ಕೆ ನಿಲ್ಲಿಸುವ ಕಬ್ಬಿಣದ ಕಂಬ ವಿದ್ಯುತ್ ತಂತಿಗೆ ತಗುಲಿ ಈ ದುರ್ಘಟನೆ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ್, ಅಡಿಷನಲ್ ಎಸ್ಪಿ ಲಕ್ಷ್ಮಿ ಗಣೇಶ್, ಅತ್ತಿಬೆಲೆ ಪೊಲೀಸರು ಹಾಗೂ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








