ಬಂಟ್ವಾಳ :
ವಿಕೃತಕಾಮಿ ತಂದೆಯೊಬ್ಬ ತನ್ನ ಮಗಳನ್ನೇ ಅತ್ಯಾಚಾರ ಮಾಡಿ ಆಕೆ ಗರ್ಭವತಿಯಾಗುವಂತೆ ಮಾಡಿದ ಕೃತ್ಯ ಬಂಟ್ವಾಳದ ಪಿಲಾತಬೆಟ್ಟು ಎಂಬಲ್ಲಿ ನಡೆದಿದೆ.
ಬಂಟ್ವಾಳದ ಪಿಲಾತಬೆಟ್ಟು ನಿವಾಸಿ ಇಸ್ಮಾಯಿಲ್ ಎಂಬಾತ ತನ್ನ ಮಗಳನ್ನೆ ಅತ್ಯಾಚಾರ ಮಾಡಿದ ವಿಕೃತ ಕಾಮಿ. ತನ್ನ ಹದಿನೈದು ವರ್ಷದ ಮಗಳನ್ನು ಕಳೆದ ಫೆಬ್ರವರಿ.8 ರಂದು ಈತ ಅತ್ಯಾಚಾರ ನಡೆಸಿದ್ದ.
ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುವ ಇಸ್ಮಾಯಿಲ್ ತನ್ನ ಹಿರಿಯ ಮಗಳು ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ತಡರಾತ್ರಿ ಮನೆ ಮಂದಿ ನಿದ್ದೆ ಮಾಡುತ್ತಿರುವಾಗ ಈ ಕೃತ್ಯ ನಡೆಸಿದ್ದ. ಮಗಳನ್ನು ಬೆದರಿಸಿದ್ದ ಇಸ್ಮಾಯಿಲ್ ಆ ಬಳಿಕವು ಹಲವು ಬಾರಿ ಅತ್ಯಾಚಾರ ನಡೆಸಿದ್ದ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಮಗಳು ಗರ್ಭವತಿಯಾಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಮಗಳು ಪೂಂಜಾಲಕಟ್ಟೆ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದು, ಬುಧವಾರ ರಾತ್ರಿಯೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ