ನದಿಪಾತ್ರ ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಲು ಸಂಸದರ ಸಲಹೆ!!

ದಾವಣಗೆರೆ:

      ಭದ್ರಾ ಜಲಾನಯನ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದರಿಂದ ಜಲಾಶಯದ ಒಳಹರಿವು ಹೆಚ್ಚಾಗಿ ನದಿಗೆ ನೀರು ಬಿಡಲಾಗುತ್ತಿದ್ದು, ತುಂಗಾಭದ್ರ ನದಿ ಅಪಾಯ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ. ಆದ್ದರಿಂದ ನದಿ ಪಾತ್ರದಲ್ಲಿರುವ ಜನರು ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಕ್ಕೆ ಹೋಗುವುದು ಸೂಕ್ತ ಎಂದು ಸಂಸದ ಜಿ.ಎಂ. ಸಿದ್ದೇಶರ ಹೇಳಿದರು.

      ಹರಿಹರ ತಾಲ್ಲೂಕಿನಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರರೊಂದಿಗೆ ಮಾತನಾಡಿದ ಅವರು, ನದಿ ದಂಡೆಯಲ್ಲಿ ಸಾರ್ವಜನಿಕರು ವಿನಾಕಾರಣ ಅಡ್ಡಾಡುವುದು, ಅಪಾಯದ ಮುನ್ಸೂಚನೆಯಿದ್ದರೂ ನಿರ್ಲಕ್ಷವಹಿಸುವುದು ಇಂತಹ ಪ್ರಮಾದಗಳನ್ನು ಮಾಡದೇ ಅತ್ಯಂತ ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿದೆ. ಏನಾದರೂ ಅಪಾಯದ ಮುನ್ಸೂಚನೆ ಕಂಡ ಕೂಡಲೇ ಹತ್ತಿರದ ಅಧಿಕಾರಿಗಳಿಗೆ ತಿಳಿಸಿದಲ್ಲಿ ಅವರು ಕ್ರಮ ಜರುಗಿಸುವರು ಎಂದರು.

      ಪ್ರಕೃತಿ ಮುಂದೆ ಯಾರೂ ಕೂಡ ದೊಡ್ಡವರಲ್ಲ, ನಾವು ನೀವು ನಿಮಿತ್ತ ಮಾತ್ರ, ಮುನಿದ ತಾಯಿ ಮುಂದೆ ಪೊರೆಯದೇ ಇರಲಾರಳು, ಈಗ ಬಂದಿರುವ ಕಷ್ಟವನ್ನು ಧೈರ್ಯವಾಗಿ ಎದುರಿಸೋಣ. ಅಧಿಕಾರಿಗಳಿಗೆ ಕ್ಷಣದ ಮಾಹಿತಿ ರವಾನಿಸುವಂತೆ ಸೂಚಿಸಿದ್ದೇನೆ. ಸಮರೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಲು ತಿಳಿಸಿದ್ದೇನೆ ಎಂದರು.

      ಸಂಸದ ಜಿ.ಎಂ. ಸಿದ್ದೇಶ್ವರ ಅವರೊಂದಿಗೆ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಮಾಜಿ ಶಾಸಕ ಬಿ.ಪಿ ಹರೀಶ, ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷ ವೀರೇಶ್ ಹನಗವಡಿ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link