ದಾವಣಗೆರೆ :

ಶಾಸಕ ರೇಣುಕಾಚಾರ್ಯರಿಗೆ ಹೋರಿಯೊಂದು ತಿವಿದಿರುವ ಘಟನೆ ದಾವಣಗೆರೆ ಹೊನ್ನಾಳಿಯಲ್ಲಿ ನಡೆದಿದೆ.
ಇಂದು ಹೊನ್ನಾಳಿಯ ನ್ಯಾಮತಿಯ ದೊಡ್ಡೇರಿ ಗ್ರಾಮದಲ್ಲಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಹೋರಿ ಓಟದಲ್ಲಿ ಭಾಗವಹಿಸಿದ್ದ ವೇಳೆಯಲ್ಲಿ ಸ್ಥಳದಲ್ಲಿದ್ದ ಜನತೆ ರೇಣುಕಾಚಾರ್ಯರವನ್ನು ಹೊತ್ತುಕೊಂಡು ಕುಣಿಯುತ್ತಿದ್ದರು. ಈ ವೇಳೆಯಲ್ಲಿ ಎದುರಿನಿಂದ ಬಂದ ಹೋರಿಯೊಂದು ರೇಣುಕಾಚಾರ್ಯ ಕಡೆ ನುಗ್ಗಿದೆ. ಈ ವೇಳೆ ಹೋರಿ ತಿವಿದಿದೆ ಎನ್ನಲಾಗಿದೆ.
ಇನ್ನು ಇದೇ ವೇಳೆ ಘಟನೆಯಲ್ಲಿ ರೇಣುಕಾಚಾರ್ಯರ ಅವರು ಕೆಳಗೆ ಬಿದಿದ್ದಾರೆ. ದಾವಣಗೆರೆ ಜಿಲ್ಲಾ ಪಂಚಾಯತ್ ಸದಸ್ಯ ಸುರೇಂದ್ರ ನಾಯ್ಕ್ ಸೇರಿದಂತೆ ಶಾಸಕರ ಜೊತೆಯಿದ್ದ ಕೆಲ ಕಾರ್ಯಕರ್ತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








