ಹೆರಿಗೆ ಆಸ್ಪತ್ರೆಯಲ್ಲಿ ಡಿಸಿಎಂ ಎಡವಟ್ಟು..!

ಬೆಂಗಳೂರು:

      ಬೆಳ್ಳಂಬೆಳಗ್ಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ದಿಢೀರ್ ಬೆಂಗಳೂರು ಪ್ರದಕ್ಷಿಣೆ ಕೈಗೊಂಡರು. ಸದಾಶಿವನಗರದ ಬಿಡಿಎ ಕ್ವಾರ್ಟರ್ಸ್‌ನಿಂದ ಹಲವು ಪ್ರದೇಶಗಳಿಗೆ ಅನಿರೀಕ್ಷಿತ  ಭೇಟಿ ನೀಡಿದರು.

    ಮೇಯರ್ ಗಂಗಾಂಬಿಕೆ ನಾಗರಾಜ್ ಹಾಗೂ ಬಿಬಿಎಂಪಿ ಆಯುಕ್ತರು ಸೇರಿ ನಗರ ಪ್ರದಕ್ಷಿಣೆ ಹಾಕಿದ ಡಿಸಿಎಂ, ದೇವಸಂದ್ರ ಬಳಿ ಇರುವ ಇಂದಿರಾ ಕ್ಯಾಂಟೀನ್, ಇಂದಿರಾ ಅಡುಗೆ ಮನೆ, ಸಾರ್ವಜನಿಕ ಗ್ರಂಥಾಲಯ, ರಿಂಗ್ ರಸ್ತೆ ವೈಟ್ ಟಾಪಿಂಗ್, ಗಂಗಾನಗರ ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

     ಆ ಸಂದರ್ಭದಲ್ಲಿ  ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಘಟಕ ಹಾಗೂ ಹೆರಿಗೆ ವಾರ್ಡ್‌ಗೆ ಚಪ್ಪಲಿ ಹಾಕಿಕೊಂಡು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ, ಇದರಿಂದ ರೋಗಿಗಳು ಹಾಗೂ ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

      ಮೊದಲು ದೇವಸಂದ್ರದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಬಿಸಿಬೇಳೆ ಬಾತ್ ತಿನ್ನುವ ಸಂದರ್ಭದಲ್ಲಿ ಚಮಚವಿಲ್ಲದೆ ಪೇಚಿಗೆ ಸಿಲುಕಿದ್ದರು ನಂತರ ಆಸ್ಪತ್ರೆ ಪರಿಶೀಲನೆಗೆ ತೆರಳಿ ರೋಗಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link