ಬಾಗಲಕೋಟೆ : ಪೋಸ್ಟ್​ ಮಾರ್ಟಮ್​ ಮಾಡುವಾಗ ವ್ಯಕ್ತಿಗೆ ಬಂತು ‘ಜೀವ’!

ಬಾಗಲಕೋಟೆ :  

     ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಿ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿರುವ ಎಡವಟ್ಟು ಬಾಗಲಕೋಟೆಯಲ್ಲಿ ನಡೆದಿದೆ. 

     ಶಂಕರ್ ಗೊಂಬಿ ಎಂಬ 27 ವರ್ಷದ ವ್ಯಕ್ತಿಗೆ ಕಾರು ಅಪಘಾತದಲ್ಲಿ ತಲೆಗೆ ಗಂಭೀರವಾದ ಗಾಯವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವೆಂಟಿಲೇಟರ್ ಮೂಲಕ ಆ್ಯಂಬುಲೆನ್ಸ್​ನಲ್ಲಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿಸಿತ್ತು. ಆದ್ರೆ ವ್ಯಕ್ತಿ ಬದುಕುವ ಸಾಧ್ಯತೆ ಕಡಿಮೆ ಇದೆ ಎಂದು ವಾಪಸ್ ಕಳುಹಿಸಿದ್ದರು. ಇನ್ನು ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

     ಈ ಸಂದರ್ಭದಲ್ಲಿ ಇಲ್ಲಿನ ವೈದ್ಯರು ಸಹ ಮೃತ‌ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನಲೆ ಮರಣೋತ್ತರ ಪರೀಕ್ಷೆ ನಡೆಸಲು ತಯಾರಿ ಮಾಡಲಾಗಿತ್ತು. ಆದರೆ, ಇನ್ನೇನು ಪೋಸ್ಟ್ ಮಾರ್ಟಮ್ ಮಾಡಬೇಕೆಂದು ಮುಂದಾದಾಗ ಶವಾಗಾರದ ವೈದ್ಯರಿಗೆ ಶವದ ಕೈಕಾಲು ಅಲುಗಾಡುತ್ತಿರುವುದು ಕಂಡು ಬಂದಿದೆ. ಶಾಕ್ ಆದ ವೈದ್ಯರು ಪರೀಕ್ಷಿಸಿದಾಗ ವ್ಯಕ್ತಿ ಬದುಕಿದ್ದಾರೆ.  ತಕ್ಷಣ ಅವರನ್ನು ಮಹಾಲಿಂಗಪುರ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಶಂಕರ್ ಗೊಂಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ