ಬೆಂಗಳೂರು :

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಬೆನ್ನಲ್ಲೇ ರಾಜ್ಯದ ಇಬ್ಬರಲ್ಲಿ ಡೆಲ್ಟಾ ಪ್ಲಸ್ ಪ್ರಭೇಧ ಪತ್ತೆಯಾಗಿದೆ.
ಕರ್ನಾಟಕದಲ್ಲಿ ಇಬ್ಬರಲ್ಲಿ ಡೆಲ್ಟಾ ಪ್ಲಸ್ ಪ್ರಭೇಧ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಒಬ್ಬರು, ಮೈಸೂರಿನಲ್ಲಿ ಒಬ್ಬರಿಗೆ ಡೆಲ್ಟಾ ಪ್ಲಸ್ ಪ್ರಭೇಧ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಡೆಲ್ಟಾ ಪ್ಲಸ್ ಪ್ರಭೇಧ ಪತ್ತೆಯಾಗಿದೆ.
ಕೊರೋನಾ 2ನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿಯೇ, ಕೊರೋನಾ 3ನೇ ಅಲೆಯ ಭೀತಿ ರಾಜ್ಯದಲ್ಲಿ ಆರಂಭಗೊಂಡಿದೆ. ಕೊರೋನಾ 3ನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನುವ ಕಾರಣಕ್ಕಾಗಿ, ನಿಯಂತ್ರಣ ಕ್ರಮಗಳ ಕುರಿತಂತೆ, ಮಹತ್ವದ ನಿರ್ಧಾರಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ. 3ನೇ ಅಲೆಯ ತಡೆಗೂ ಸಿದ್ಧತೆ ಕೈಗೊಂಡಿದೆ. ಇದರ ಮಧ್ಯೆ ಬೇರೆ ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದಂತ ಡೆಲ್ಟಾ ಪ್ಲೆಸ್ ರೋಗವು, ಈಗ ರಾಜ್ಯಕ್ಕೂ ಕಾಲಿಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








