ಮಲ್ಪೆ ಬೀಚ್ ನಲ್ಲಿ ಬೃಹದಾಕಾರದ ಡೆವಿಲ್ ಫಿಶ್ ಪತ್ತೆ!!!

ಉಡುಪಿ :

      ಅಪರೂಪದ ದೊಡ್ಡ ಗಾತ್ರದ, ದೆವ್ವದಾಕಾರದ ಮೀನೊಂದು ಉಡುಪಿಯ ಮಲ್ಪೆಯಿಂದ ತೆರಳಿದ ಕಡಲಮಕ್ಕಳ ಬಲೆಗೆ ಬಿದ್ದಿದೆ.

      ಸುಮಾರು ಐದೂವರೆ ಅಡ್ಡಿ ಎತ್ತರವಿರುವ ಈ ಮೀನು 6 ಕೆಜಿ ತೂಕವಿದೆ. ದೆವ್ವದ ಆಕಾರದಲ್ಲಿರುವ ಮೀನು ತಟ್ಟಂತ ಕಂಡರೆ ಭಯವಾಗದೆ ಇರದು. 

      ಸಾಮಾನ್ಯ ಭಾಷೆಯಲ್ಲಿ ಹೇಳೋದಾದರೆ ಇದೊಂದು ಆಕ್ಟೋಪಸ್ ಜಾತಿಗೆ ಸೇರಿದ ಮೀನು ಎನ್ನಲಾಗುತ್ತಿದೆ. ಇದರ ವೈಜ್ಞಾನಿಕ ಹೆಸರು ಬಿಗ್ ಬ್ಲೂ ಆಕ್ಟೋಪಸ್ , ಡೆವಿಲ್ ಫಿಶ್ ಎಂದೇ ಈ ಮೀನು ಖ್ಯಾತಿ ಪಡೆದಿದೆ. 

     ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದ ಕಲ್ಲು ಬಂಡೆಗಳ ಅಡಿಯಲ್ಲಿ ಈ ಜಾತಿ ಮೀನುಗಳು ಓಡಾಡುತ್ತವೆ. 150 ಮೀಟರ್ ಆಳದಲ್ಲಿ ಈ ಅಕ್ಟೋಪಸ್ ಜೀವಿಸುತ್ತದೆ. ಚೀನಾ, ಸಿಂಗಾಪುರ್, ಹಾಂಗ್ ಕಾಂಗ್ ನಲ್ಲಿ ಈ ಮೀನಿಗೆ ಬೇಡಿಕೆ ಹೆಚ್ಚು. ಸಂತಾನೋತ್ಪತ್ತಿ ಬಳಿಕ ಗಂಡು ಮೀನು ಸತ್ತರೆ, ಹೆಣ್ಣು ಮೀನು ಮರಿ ಹಾಕಿ ಅಸುನೀಗುತ್ತೆ. ಈ ತಳಿಯ ಮೀನಿನ ವಿಶೇಷ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link