ಮಂಗಳೂರು:
ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಸಮ್ಮತವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಯೋಧ್ಯಾ ಭೂ ವಿವಾದದ ಕುರಿತು ಸುಪ್ರೀಂಕೋರ್ಟ್‌ನಿಂದ ಐತಿಹಾಸಿಕ ತೀರ್ಪು ಹೊರಬಿದ್ದಿರುವ ಹೊತ್ತಿನಲ್ಲೇ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂಕೋರ್ಟ್ ತೀರ್ಪಿಗೆ ಎಲ್ಲರೂ ತಲೆ ಬಾಗಲೇ ಬೇಕು. ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಲಾಗಿದೆ. ಮುಸ್ಲಿಮರಿಗೆ ಪ್ರತ್ಯೇಕ ಮಸೀದಿ ನೀಡಲು ಜಾಗವನ್ನೂ ನೀಡಲಾಗಿದೆ. ಯಾರಿಗೂ ಅನ್ಯಾಯವಾಗಿಲ್ಲ. ತೀರ್ಪು ನ್ಯಾಯಸಮ್ಮತವಾಗಿದೆ ಎಂದು ಹೇಳಿದ್ದಾರೆ.
ನಾವು ತಿನ್ನುವ ಅನ್ನ ಯಾರು ಬೆಳೆದಿದ್ದಾನೆಯೋ ಗೊತ್ತಿಲ್ಲ. ನಾವು ಸೇವಿಸುವ ತರಕಾರಿಯನ್ನು ಹಿಂದೂ ಬೆಳೆದಿರುವುದಾ, ಮುಸಲ್ಮಾನ ಅಥವಾ ಕ್ರೈಸ್ತ ಬೆಳೆದಿರುವುದಾ ಗೊತ್ತಿಲ್ಲ. ಅದೇ ರೀತಿ ಹಾಲು-ನೀರು ಬೆರೆತಂತೆ ಸಮಾಜ ಇರಬೇಕು. ತೀರ್ಪಿನಿಂದ ಯಾರೂ ಚಂಚಲ ಆಗಬಾರದು. ತೀರ್ಪಿನ ನಂತರ ಸಾಮರಸ್ಯದಿಂದ ಬದುಕಬೇಕು. ಈ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳೋಣ ಎಂದು ಹೆಗ್ಗಡೆಯವರು ರಾಷ್ಟ್ರದ ಜನತೆಯಲ್ಲಿ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ